ಕಾಂಕ್ರಿಟ್ ರಸ್ತೆ ನಿರ್ಮಾಣ: ಶಾಸಕ
‘ಬಂದ್ ಆಗಿರುವ ರಸ್ತೆಯ ಭಾಗಶಃ ಭಾಗ ಮಾತ್ರ ಮುಕ್ತಗೊಳಿಸಿ ಉಳಿದ ಭಾಗದಲ್ಲಿ ಕಾಮಗಾರಿ ಮುಂದುವರಿಯಲಿದೆ. ಬಸವ ವನದ ಬಳಿ ಮೇಲ್ಸೇತುವೆಗೆ ಆರು ಗರ್ಡರ್ ಅಳವಡಿಕೆ ಬಾಕಿ ಇರುವುದರಿಂದ ಹುಬ್ಬಳ್ಳಿ ಆಪ್ಟಿಕಲ್ಸ್ ವರೆಗೆ ಮಾತ್ರ ರಸ್ತೆ ಮುಕ್ತಗೊಳಿಸಲಾಗುತ್ತದೆ. ಈ ಮೊದಲು ಡಾಂಬರು ರಸ್ತೆ ಮಾಡಲು ನಿರ್ಧರಿಸಲಾಗಿತ್ತು. ವಿಪರೀತ ವಾಹನಗಳು ಸಂಚರಿಸುವುದರಿಂದ ಕಾಂಕ್ರಿಟ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ‘ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ನಂತರವೇ ಉಪನಗರ ಪೊಲೀಸ್ ಠಾಣೆ ಕಟ್ಟಡ ತೆರವು ಹಾಗೂ ಆ ಭಾಗದಲ್ಲಿ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.