ಲಕ್ಷ್ಮೇಶ್ವರ: ಪಟ್ಟಣದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ನಡೆಸಿದ ರೈತರ ಅಹೋರಾತ್ರಿ ಧರಣಿ ಸತ್ಯಾಗ್ರಹ ಗುರುವಾರ 13ನೇ ದಿನಕ್ಕೆ ಕಾಲಿಟ್ಟಿತು.

ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ಪಾಳಾ-ಬದಾಮಿ ರಾಜ್ಯ ಹೆದ್ದಾರಿಯ ಕಸಗೂಡಿಸಿ ರೈತರು ಪ್ರತಿಭಟನೆ ನಡೆಸಿದರು.

ಆದರಹಳ್ಳಿಯ ಕುಮಾರ ಮಹಾರಾಜರು ಮಾತನಾಡಿ, ‘ಉಪವಾಸ ಕೈಗೊಂಡು ಅಸ್ವಸ್ಥನಾದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಖರೀದಿ ಕೇಂದ್ರ ತೆರೆಯುವ ಭರವಸೆ ನೀಡಿದ್ದರು. ಇದುವರೆಗೂ ಕೇಂದ್ರ ತೆರೆಯುವ ಕುರಿತು ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ’ ಎಂದರು. ಶನಿವಾರ ಕೇಂದ್ರ ಆರಂಭಿಸದಿದ್ದರೆ ಮರಳಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ ಮಾತನಾಡಿ, ‘ಹೋರಾಟ ಪ್ರಾರಂಭವಾಗಿ 13 ದಿನ ಕಳೆದಿವೆ. ಇದುವರೆಗೂ ಸರ್ಕಾರ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಿಲ್ಲ. ರೈತರ ಸಹನೆಯನ್ನು ಸರ್ಕಾರ ಪರೀಕ್ಷೆ ಮಾಡಬಾರದು’ ಎಂದರು.

ಚಂಬಣ್ಣ ಬಾಳಿಕಾಯಿ, ಪೂರ್ಣಾಜಿ ಖರಾಟೆ, ನಾಗರಾಜ ಚಿಂಚಲಿ, ಶರಣು ಗೋಡಿ, ಜೆಡಿಎಸ್ ವಕ್ತಾರ ವೆಂಕನಗೌಡ ಗೋವಿಂದಗೌಡ್ರ, ತಿಪ್ಪಣ್ಣ ಸಂಶಿ, ಪ್ರಕಾಶ ಕೊಂಚಿಗೇರಿಮಠ, ನೀಲಪ್ಪ ಶೆರಸೂರಿ, ಟಾಕಪ್ಪ ಸಾತಪೂತೆ, ಚನ್ನಪ್ಪ ಷಣ್ಮುಖಿ, ಫಕ್ಕೀರೇಶ ಅಣ್ಣಿಗೇರಿ, ನಿಂಗಪ್ಪ ಗದ್ದಿ, ಮಲ್ಲೇಶ ವಡ್ಡರ, ಶಿವಾನಂದ ಲಿಂಗಶೆಟ್ಟಿ, ಸುರೇಶ ಹಟ್ಟಿ, ಶಿವನಗೌಡ್ರು, ದಾದಾಪೀರ ಮುಚ್ಚಾಲೆ, ರಾಜಣ್ಣ ಗುಡಗೇರಿ, ರಾಜು ಬೆಲ್ಲದ, ಮುದಕಪ್ಪ ಗದ್ದಿ, ಎಂ.ಎಂ. ಗದಗ, ದೇವಪ್ಪ ಮಾಳಗಿಮನಿ ಇದ್ದರು. ಈ ವೇಳೆ ಈರಣ್ಣ ಅಂಗಡಿ ಹಾಗೂ ಸಂಗಡಿಗರು ಗೀಗೀ ಪದ ಹಾಡಿದರು.

ಈವರೆಗೆ ರೈತರು ಶಾಂತಿಯುತ ಹೋರಾಟ ನಡೆಸಿದ್ದಾರೆ. ಹೋರಾಟ ಉಗ್ರ ಸ್ವರೂಪ ತಾಳುವ ಮೊದಲೇ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು
ಮಹೇಶ ಹೊಗೆಸೊಪ್ಪಿನ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.