ಅರಕಲಗೂಡು: ಡ್ರಗ್ಸ್ ಮಾಫಿಯಾ ವಿರುದ್ಧ ಸರ್ಕಾರ ಹಾಗೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರ ವಾರ ಮಾತನಾಡಿದ ಅವರು, ಆಳುವವರು, ಆಧಿಕಾರಿಗಳು ಇದರೊಂದಿಗೆ ಕೈಜೋಡಿಸಿದ್ದರಿಂದ ಇದು ನಿರಾತಂಕವಾಗಿ ಬೆಳೆದು ಬಂದಿದೆ. ಈ ವರೆಗೆ ಆಡಳಿತ ನಡೆಸಿದ ಎಲ್ಲ ಸರ್ಕಾರಗಳ ಹೊಣೆ ಗಾರಿಕೆಯೂ ಇದರಲ್ಲಿದೆ ಎಂದರು.

ಕರ್ನಾಟಕದಲ್ಲಿ ನಡೆಯುತ್ತಿ ರುವ ವಿದ್ಯಮಾನಗಳು ಕನ್ನಡಿಗರ ಮಾನ ಹರಾಜು ಹಾಕುತ್ತಿವೆ. ಭ್ರಷ್ಟಾಚಾರ ಕಬಂಧ ಬಾಹುಗಳಿಂದಾಗಿ ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗಿ ಕುಟುಂಬಗಳು ಕಣ್ಣೀರಿನಿಂದ ಕೈತೊಳೆಯುತ್ತಿವೆ. ತೋರಿಕೆಗೆ ಕ್ರಮ ಕೈಗೊಳ್ಳುತ್ತಿರುವಂತೆ ನಟಿಸದೆ ಇದನ್ನು ಬೇರು ಸಹಿತ ಕಿತ್ತುಹಾಕಲು ಸರ್ಕಾರ ದೃಢ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನಲ್ಲೂ ಗಾಂಜಾ ಬೆಳೆಯುವ ಕ್ರಿಯೆ ನಿರಂತರವಾಗಿದ್ದು, ಇದಕ್ಕೆ ಹೊರ ರಾಜ್ಯದವರ ನಂಟು ಇದೆ. ಇದು ಅಧಿಕಾರಿಗಳಿಗೆ ಗೊತ್ತಿರದ ವಿಷಯವಲ್ಲ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.