ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ 1.60 ಲಕ್ಷ ಲೀಟರ್ ಪ್ಯಾಕೇಟ್‌ ಹಾಲು ಮಾರಾಟ: ಪ್ರಿಯ ರಂಜನ್‌

ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ
Last Updated 19 ಆಗಸ್ಟ್ 2021, 15:04 IST
ಅಕ್ಷರ ಗಾತ್ರ

ಹಾಸನ: ಹಾಸನ ಹಾಲು ಒಕ್ಕೂಟದ ವತಿಯಿಂದ ಸಿಹಿ ಉತ್ಪನ್ನಗಳಿಗೆ ಶೇಕಡಾ 10 ರಷ್ಟು ರಿಯಾಯ್ತಿದರದಲ್ಲಿ ಮಾರಾಟ ಮಾಡುವ ‘ನಂದಿನಿ ಸಿಹಿ ಉತ್ಸವ’ಕ್ಕೆ ಗುರುವಾರ ಚಾಲನೆ ನೀಡಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯ ನಂದಿನಿ ಮಿಲ್ಕ್‌ ಪಾರ್ಲರ್‌ನಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಹೊನ್ನವಳ್ಳಿ ಸತೀಶ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಡಿ.ಕೆ.ಪ್ರಿಯರಂಜನ್ ಚಾಲನೆ ನೀಡಿ, ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಪ್ರಿಯ ರಂಜನ್ ಮಾತನಾಡಿ, ಕೆಎಂಎಫ್‌ ವತಿಯಿಂದ ಪ್ರತಿ ವರ್ಷ ಎರಡು ಬಾರಿ ನಂದಿನಿ ಸಿಹಿ ಉತ್ಸವನಡೆಸಿಕೊಂಡು ಬರಲಾಗುತ್ತಿದೆ. ಮೈಸೂರು ಪಾಕ್, ಗೋಡಂಬಿ ಬರ್ಫಿ, ಪೇಡಾ, ಕುಂದಾ, ಹಲ್ವಾಸೇರಿದಂತೆ ನಂದಿನಿ ಸಿಹಿ ತಿನಿಸುಗಳನ್ನು ಹದಿನೈದು ದಿನ ಶೇಕಡಾ 10 ರಷ್ಟು ರಿಯಾಯ್ತಿ ದರದಲ್ಲಿಎಲ್ಲ ನಂದಿನಿ ಮಿಲ್ಕ್ ಪಾರ್ಲರ್‌ಗಳು, ಅಧಿಕೃತ ಏಜೆಂಟರ್ ಮೂಲಕ ಮಾರಾಟ ಮಾಡಲಾಗುತ್ತದೆ.
ನಂದಿನಿ ನ್ಯಾಚ್ಯುರಲ್ ಐಸ್‍ಕ್ರೀಂ 125 ಮಿ.ಲೀ. ಪ್ಯಾಕ್ ಖರೀದಿಸಿದರೆ ಒಂದು ಪ್ಯಾಕ್ ಉಚಿತವಾಗಿಗ್ರಾಹಕರಿಗೆ ಸಿಗಲಿದೆ ಎಂದು ತಿಳಿಸಿದರು.

ಈ ಹಿಂದೆ ನಡೆದ ಉತ್ಸವದಲ್ಲಿ ನಂದಿನಿ ಸಿಹಿ ಉತ್ಪನ್ನಗಳು ಮೂರು ಪಟ್ಟು ಹೆಚ್ಚು ಮಾರಾಟವಾಗಿದ್ದವು. ಉತ್ಪನ್ನಗಳು ಸದಾ ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿ ಆಗಿರುವುದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಲಾಕ್‍ಡೌನ್ ಸಂದರ್ಭದ ಕೆಲವು ದಿನಗಳಲ್ಲಿ ಹಾಸನ ಹಾಲು ಒಕ್ಕೂಟ ( ಹಾಮುಲ್) ದ ಉತ್ಪನ್ನಗಳವಹಿವಾಟಿಗೆ ಹಿನ್ನಡೆಯಾಗಿತ್ತು. ಹೋಟೆಲ್‍ಗಳು, ಸಮಾರಂಭಗಳು ನಡೆಯುತ್ತಿರುವುದರಿಂದ ಹಾಲುಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದ್ದು,ವಹಿವಾಟು ಚೇತರಿಸಿಕೊಂಡಿದೆ. ಲಾಕ್‍ಡೌನ್ ವೇಳೆ ನಂದಿನಿ ಪ್ಯಾಕೆಟ್ ಹಾಲು ಪ್ರತಿದಿನ 1.40 ಲಕ್ಷ ಲೀಟರ್ ಮಾರಾಟವಾಗುತ್ತಿತ್ತು. ಆದರೆ ಈಗ ನಿತ್ಯ 1.60 ಲಕ್ಷ ಲೀಟರ್ ವರೆಗೂ ಮಾರಾಟವಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT