ಅಳಿದುಳಿದಿರುವ ಸೌರ ವಿದ್ಯುತ್ ತಂತಿಯ ಕಂಬಗಳ ಮೂಲಕ ರೈತರೊಬ್ಬರು ಪಂಪ್‌ಸೆಟ್‍ಗೆ ವಿದ್ಯುತ್ ತಂತಿ ಅಳವಡಿಸಿರುವುದು
ಸೌರ ವಿದ್ಯುತ್ ಬೇಲಿಗೆ ವಿದ್ಯುತ್ ಹಾಯಿಸಲು ಇಟ್ಟಿದ್ದ ಬ್ಯಾಟರಿ ಮತ್ತು ಪ್ಯಾನೆಲ್ ಅನಾಥವಾಗಿ ಬಿದ್ದಿರುವುದು.
ಜೋಳದ ಹೊಲವೊಂದನ್ನು ಒಂದೇ ರಾತ್ರಿಗೆ ಆನೆಗಳು ತಿಂದು ಮುಗಿಸಿರುವುದು.

ಅನೇಕ ದಿನಗಳಿಂದ ಆನೆಗಳ ಹಾವಳಿ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಬೆಳೆಗಳು ಉಳಿಯುತ್ತಿಲ್ಲ. ಈ ಕುರಿತು ಶಾಸಕರ ಗಮನಕ್ಕೂ ತಂದಿದ್ದೇವೆ.
ಉಮೇಶ್ ತರಿಗಳಲೆ ಗ್ರಾಮದ ರೈತ
ನಾನು ಸಚಿವನಾಗಿದ್ದಾಗ ಈ ಭಾಗದ ಕಾಡಿನಂಚಿಗೆ ಟ್ರಂಚ್ ಸೌರ ವಿದ್ಯುತ್ ತಂತಿಯ ಬೇಲಿ ಮಾಡಿಸಿ ಆನೆಗಳ ಹಾವಳಿ ನಿಯಂತ್ರಿಸಲಾಗಿತ್ತು. ಶಾಶ್ವತ ಪರಿಹಾರದ ಕುರಿತು ಈಗಾಗಲೇ ಚರ್ಚಿಸಿದ್ದು ಕ್ರಮ ಕೈಗೊಳ್ಳಲಾಗುವುದು.
ಎ.ಮಂಜು ಶಾಸಕ
ಹಿಂದೆ ಅಳವಡಿಸಿದ್ದ ಸೌರ ವಿದ್ಯುತ್ ತಂತಿ ಕಿತ್ತು ಹೋಗಿದ್ದು ಆನೆಗಳು ಸುಲಭವಾಗಿ ಕಾಡಿನಿಂದ ಹೊರಗೆ ಬರುತ್ತಿವೆ. ಹೊಸದಾಗಿ ಸೌರ ವಿದ್ಯುತ್ ಬೇಲಿ ಅಳವಡಿಸಲು ಟೆಂಡರ್ ಕರೆದಿದ್ದು ಕೆಲವೇ ದಿನಗಳಲ್ಲಿ ಬೇಲಿ ಅಳವಡಿಸಲಾಗುವುದು.
ಯಶ್ಮಾ ಮಾಚಮ್ಮ ವಲಯ ಅರಣ್ಯಾಧಿಕಾರಿ ಅರಕಲಗೂಡುಸಿಗದ ಪರಿಹಾರ: ರೈತರಿಗೆ ಸಂಕಷ್ಟ
2 ವರ್ಷಗಳ ಹಿಂದೆ ಮರಿಯಾನಗರದ ಬಳಿ ಆನೆಗಳು ಒಬ್ಬರನ್ನು ತುಳಿದು ಸಾಯಿಸಿದ್ದು ಕಳೆದೆರಡು ತಿಂಗಳ ಹಿಂದೆ ತರಿಗಳಲೆ ಗ್ರಾಮದ ಕಾಡಂಚಿನಲ್ಲಿರುವ ಮನೆಯ ಬಳಿ ಕಟ್ಟಿದ್ದ ಹಸುವಿಗೆ ಆನೆಯು ಕೋರೆಯಿಂದ ತಿವಿದಿತ್ತು. ಚಿಕಿತ್ಸೆ ಫಲಕಾರಿಯಾದೇ ಹಸು ಮೃತಪಟ್ಟಿತ್ತು. ಅರ್ಜಿ ಸಲ್ಲಿಸಿದ್ದು ಇದುವರೆಗೂ ಪರಿಹಾರವೂ ಸಿಕ್ಕಿಲ್ಲ ಎನ್ನುತ್ತಾರೆ ಭಾಗ್ಯಮ್ಮ. ಕಾಡಿನಂಚಿನಲ್ಲಿ ಅತಿ ಹೆಚ್ಚು ಆನೆಗಳ ದಾಳಿಗೆ ತುತ್ತಾಗುತ್ತಿರುವ ಪ್ರದೇಶದ 152 ಮತ್ತು 153 ರ ಸರ್ವೆ ನಂಬರ್‌ಗಳ ಜಮೀನು ದಾಖಲೆಗಳಲ್ಲಿ ಸರ್ಕಾರಿ ಗೋಮಾಳ ಎಂದು ನಮೂದಾಗಿದೆ. ಆದರೆ ಅನೇಕ ವರ್ಷಗಳಿಂದ ರೈತರು ಇಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದು ಅವರಿಗೆ ಇದುವರೆಗೆ ಸಾಗುವಳಿ ಪತ್ರ ದೊರೆತಿಲ್ಲ. ಹೀಗಾಗಿ ಆನೆಗಳು ಎಷ್ಟೇ ನಷ್ಟ ಉಂಟು ಮಾಡಿದರೂ ಸರ್ಕಾರದಿಂದ ಪರಿಹಾರವೂ ದೊರೆಯುತ್ತಿಲ್ಲ. ವ್ಯವಸಾಯಕ್ಕೆ ಮಾಡಿದ್ದ ಶ್ರಮ ಮತ್ತು ಖರ್ಚು ಮಾಡಿದ ಹಣವು ವ್ಯರ್ಥವಾಗುತ್ತಿದೆ.
ಟ್ರಂಚ್‌ಗೆ ಮಣ್ಣು ತುಂಬಿ ಬರುವ ಆನೆಗಳು
ಆನೆಗಳು ಕಾಡಿನಿಂದ ಹೊರಗೆ ಬರದಂತೆ ಕೆಲ ವರ್ಷಗಳ ಹಿಂದೆ ಸೌರ ವಿದ್ಯುತ್ ಬೇಲಿ ಅಳವಡಿಸಿದ್ದು ಈ ಭಾಗದಲ್ಲಿ ಆನೆಗಳ ಹಾವಳಿ ತಗ್ಗಿತ್ತು. ಕಳೆದೆರಡು ವರ್ಷಗಳಿಂದ ಸೌರ ವಿದ್ಯುತ್ ಬೇಲಿಯೂ ಇಲ್ಲವಾಗಿದ್ದು ಆನೆಗಳು ನಿರಾಂತಂಕವಾಗಿ ಕಾಡಿನಿಂದ ಹೊರಬರುತ್ತಿವೆ ಎನ್ನುತ್ತಾರೆ ಸ್ಥಳೀಯರು. ಕಾಡಿನಂಚಿನಲ್ಲಿ 15 ರಿಂದ 20 ಅಡಿಯ ಟ್ರಂಚ್ ತೆಗೆದಿದ್ದು ಟ್ರಂಚ್‍ಗಳಿಗೆ ಮಣ್ಣು ಮುಚ್ಚಿ ದಾರಿ ಮಾಡಿಕೊಂಡು ಆನೆಗಳು ಬರುತ್ತಿವೆ. ಟ್ರಂಚ್ ಉದ್ದಕ್ಕೂ ನೋಡಿದರೆ ಅಲ್ಲೊಂದು ಇಲ್ಲೊಂದು ಸೌರ ವಿದ್ಯುತ್ ತಂತಿ ಅಳವಡಿಸಿದ್ದ ಕಂಬಗಳು ಕಾಣುತ್ತಿದ್ದು ತಂತಿ ಕಣ್ಮರೆಯಾಗಿದೆ. ಸೌರ ಬ್ಯಾಟರಿ ಮತ್ತು ಪ್ಯಾನಲ್ ಅನಾಥವಾಗಿ ಬಿದ್ದಿದ್ದು ಅದನ್ನು ಸರಿಪಡಿಸುವುದು ಹೋಗಲಿ ಕನಿಷ್ಠ ಪಕ್ಷ ಎತ್ತಿಡುವ ಕೆಲಸವನ್ನು ಅರಣ್ಯ ಇಲಾಖೆಯವರು ಮಾಡಿಲ್ಲ. ಉಳಿದಿರುವ ಕಂಬಗಳನ್ನು ರೈತರು ತಮ್ಮ ಪಂಪ್‍ಸೆಟ್‌ಗೆ ವಿದ್ಯುತ್ ತಂತಿ ಎಳೆಯಲು ಬಳಸಿಕೊಂಡಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಬೆಳೆಯನ್ನು ಉಳಿಸಿಕೊಳ್ಳಲು ಕೆಲವೇ ರೈತರು ಸ್ವಂತ ಖರ್ಚಿನಲ್ಲಿ ಸೌರ ವಿದ್ಯುತ್ ತಂತಿಯನ್ನು ಜಮೀನಿನ ಸುತ್ತ ಅಳವಡಿಸಿದ್ದು ಆ ರೈತರು ಮಾತ್ರ ಬೆಳೆ ಉಳಿಸಿಕೊಂಡಿದ್ದಾರೆ. ಉಳಿದೆಲ್ಲ ರೈತರು ಕೃಷಿ ಮಾಡಲು ವ್ಯಯಿಸಿದ್ದ ಲಕ್ಷಾಂತರ ರೂಪಾಯಿಯೂ ಇಲ್ಲದೇ ಬೆಳೆಯೂ ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.