ಹಿರೀಸಾವೆ: ಸರ್ಕಾರಿ ಶಾಲೆಗಳನ್ನು ಉಳಿಸುವ ಅಭಿಯಾನ ನಡೆಯುತ್ತಿದೆ. ಆದರೆ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಬಹುತೇಕ ಕೊಠಡಿಗಳ ಚಾವಣಿಯ ಸಿಮೆಂಟ್ ಕಾಂಕ್ರೀಟ್ ಅಲ್ಲಲ್ಲಿ ಕಳಚಿ ಬೀಳುತ್ತಿದೆ.

ಈ ಕಟ್ಟಡವನ್ನು ಸುಮಾರು 40 ವರ್ಷಗಳ ಹಿಂದೆ ಕಟ್ಟಲಾಗಿದೆ. ಆರ್ಸಿಸಿಯೂ ಸತ್ವ ಕಳೆದುಕೊಂಡು, ಕಟ್ಟಡ ಶಿಥಿಲಗೊಂಡಿದೆ. ಕಳೆದ ವಾರ ಶಾಲಾ ಅವಧಿಯಲ್ಲಿ 10ನೇ ತರಗತಿಯ ಕೊಠಡಿ ಒಳಗಿನ ಮೇಲ್ಚಾವಣಿಯ ಸಿಮೆಂಟ್ ಕಾಂಕ್ರೀಟ್ ಉದುರಿ ಬಿದ್ದಿದೆ.

ವಿದ್ಯಾರ್ಥಿಗಳು, ಶಿಕ್ಷಕರು ಆ ಸಮಯದಲ್ಲಿ ಕೋಣೆಯ ಹೊರಭಾಗದಲ್ಲಿದ್ದು, ಅಪಾಯ ತಪ್ಪಿದೆ. ಮಳೆಯ ನೀರಿನಿಂದ ಗೋಡೆಗಳು ತೇವಗೊಂಡು, ಬಿರುಕು ಬಿಟ್ಟಿವೆ. ಶಿಕ್ಷಕರು ಜೀವ ಭಯದಲ್ಲಿ ಬೋಧನೆ ಮಾಡಿದರೆ, ವಿದ್ಯಾರ್ಥಿನಿಯರು ಆದೇ ಭಯದಲ್ಲಿ ಪಾಠ ಕೇಳುತ್ತಿದ್ದಾರೆ.

ಹೋಬಳಿಯಲ್ಲಿರುವ ಏಕೈಕ ಹೆಣ್ಣು ಮಕ್ಕಳ ಪ್ರೌಢಶಾಲೆ ಇದಾಗಿದ್ದು, ಪ್ರಸಕ್ತ ವರ್ಷ ಎಂಟು, ಒಂಬತ್ತು ಮತ್ತು 10ನೇ ತರಗತಿಯಿಂದ (ಕನ್ನಡ ಹಾಗೂ ಇಂಗ್ಲಿಷ್ ವಿಭಾಗದಿಂದ) 137 ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.

ಮಳೆ ಬಂದರೆ ಅಲ್ಲಲ್ಲಿ ನೀರು ಸೋರುತ್ತದೆ. ಎಲ್ಲ ಕೋಣೆಗಳ ಚಾವಣಿಯ ಕಾಂಕ್ರೀಟ್ ಅಲ್ಲಲ್ಲಿ ಕಿತ್ತು ಹೋಗಿದ್ದು, ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳು ಕಾಣುತ್ತಿವೆ. ನೀರು ಸೋರಿಕೆಯಿಂದ ಕೆಲವು ಕಡೆ ಗೋಡೆ, ಚಾವಣಿ ಪಾಚಿಗಟ್ಟಿ, ಕಪ್ಪು ಬಣ್ಣಕ್ಕೆ ತಿರುಗಿವೆ.

ಶಾಲೆ ಕಟ್ಟಡದಲ್ಲಿ ಒಟ್ಟು 11 ಕೊಠಡಿಗಳಿದ್ದು, ಬಹುತೇಕ ಕೊಣೆಗಳು ಸೋರುತ್ತಿವೆ. ಮೂರು ಕೊಠಡಿಯಲ್ಲಿನ ಮೇಲ್ಚಾವಣಿ ಸಿಮೆಂಟ್ ಕಾಂಕ್ರೀಟ್ ಉದುರಿ ಬಿದ್ದಿರುವುದರಿಂದ, ಆ ಕೊಠಡಿಯಲ್ಲಿ ಕಳೆದ ವರ್ಷದಿಂದ ಪಾಠ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ವರ್ಷದ ಇನ್ನೆರಡು ಕೋಣೆಗಳು ಬೋಧನೆ ಮಾಡದ ಸ್ಥಿತಿಗೆ ತಲುಪಿವೆ.

ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಶಾಲೆಗೆ ಹೊಸ ಕೋಣೆಗಳ ನಿರ್ಮಾಣ ಮಾಡ ಬಗ್ಗೆ ಗಮನಹರಿಸಬೇಕಿದೆ ಎಂದು ಪಾಲಕರು ಒತ್ತಾಯಿಸಿದ್ದಾರೆ.

ಬಾಲಕಿಯರ ಪ್ರೌಢಶಾಲೆಯ ಕಟ್ಟಡ ಸಂಪೂರ್ಣ ಶಿಥಿಲವಾಗಿದೆ. ಹೊಸ ಕಟ್ಟಡ ನಿರ್ಮಾಣ ಮಾಡುವುದು ಅಗತ್ಯವಾಗಿದೆ.
-ರಂಗಸ್ವಾಮಿ, ಎಸ್ಡಿಎಂಸಿ ಉಪಾಧ್ಯಕ್ಷ

ಶಾಲಾ ಅವಧಿಯಲ್ಲಿ ಒಳಭಾಗದಲ್ಲಿ ಚಾವಣಿ ಕಾಂಕ್ರೀಟ್ ಉದುರಿ ಬಿತ್ತು. ಯಾರಿಗೂ ತೊಂದರೆ ಅಗಿಲ್ಲ. ಕೊಣೆಗಳ ಕೊರತೆ ಇದೆ.
-ಸಿಂಚನಾ, 10ನೇ ತರಗತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.