ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ ಡ್ರೈವ್‌ ‍ಪ್ರಕರಣ | ಸಂತ್ರಸ್ತೆಯರ ಪರ ಜೆಡಿಎಸ್‌ ಪಕ್ಷ: ಜಿ.ಟಿ. ದೇವೇಗೌಡ

Published 31 ಮೇ 2024, 8:01 IST
Last Updated 31 ಮೇ 2024, 8:01 IST
ಅಕ್ಷರ ಗಾತ್ರ

ಹಾಸನ: ಪ್ರಜ್ವಲ್‌ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ ಎಂದು ಹೇಳಿದ್ದೇವೆ. ತನಿಖೆಯಿಂದ ಸಂಪೂರ್ಣ ಉತ್ತರ ಹೊರ ಬರಲಿ. ನಮ್ಮ ಪಕ್ಷ ನೂರಕ್ಕೆ ನೂರು ಸಂತ್ರಸ್ತೆಯರ ಪರವಾಗಿ ಇರಲಿದೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರ ಬರುವವರೆಗೂ ನಾವೇನೂ ಹೇಳಲು ಆಗಲ್ಲ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಎಚ್‌.ಟಿ. ಕುಮಾರಸ್ವಾಮಿ ಮೊದಲೇ ಹೇಳಿದ್ದರು. ಪ್ರಜ್ವಲ್‌ ರೇವಣ್ಣ ಜೊತೆಗೆ ಪೆನ್‌ಡ್ರೈವ್ ಹಂಚಿದವರ ಬಂಧನವೂ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಅಮಾನತು ಮಾಡಿದ್ದು, ಅವರ ಬಂಧನದಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಮಗೆ ಯಾವುದೇ ಮುಜುಗರ ಇಲ್ಲ ಎಂದು ಹೇಳಿದರು.

ನಾವು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದೆವು. ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ನಾವು ಸೇರಿ ಎಲ್ಲರೂ ಒತ್ತಾಯಿಸಿದ್ದೆವು. ಈಗ ಬಂಧನ ಆಗಿದೆ. ಅಲ್ಲಿಗೆ ನಮ್ಮ ಕೆಲಸ ಮುಗಿಯಿತು. ಎಸ್‌ಐಟಿ ತನಿಖೆ ಮುಂದುವರಿಸುತ್ತದೆ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT