ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಬೆಟ್ಟಿಂಗ್‌ಗೆ ‘ಲೋಟಸ್‌’ ಆ್ಯಪ್‌ ಬಳಕೆ, ತನಿಖೆ ಚುರುಕು

ಗೂಗಲ್‌ ಪೇ, ಫೋನ್ ಪೇ ಮೂಲಕ ಹಣದ ವ್ಯವಹಾರ
Last Updated 25 ಸೆಪ್ಟೆಂಬರ್ 2020, 12:15 IST
ಅಕ್ಷರ ಗಾತ್ರ

ಹಾಸನ: ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿರುವ ಬಡಾವಣೆ
ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ಆನ್‌ಲೈನ್‌ ಅಪ್ಲಿಕೇಶನ್‌ ಬಳಸಿ ಬೆಟ್ಟಿಂಗ್‌ ನಡೆಸುತ್ತಿದ್ದವರಲ್ಲಿ ಇಬ್ಬರು ವಿದ್ಯಾರ್ಥಿಗಳು, ಹೋಟೆಲ್‌ ಕ್ಯಾಷಿಯರ್‌,ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಉದ್ಯೋಗಿ ಸೇರಿದ್ದಾರೆ. ಆಕಾಶ್‌ ಬೆಂಗಳೂರಿನ ಬುಕ್ಕಿಯೊಂದಿಗೆ ನೇರನಂಟು ಹೊಂದಿದ್ದರೆ, ಉಳಿದ ನಾಲ್ವರು ಹಣ ಕಟ್ಟಿ ಆಟವಾಡುತ್ತಿದ್ದರು. ಗೂಗಲ್‌ ಪೇ, ಫೋನ್ ಪೇ ಮೂಲಕಹಣದ ವ್ಯವಹಾರ ನಡೆಸಲಾಗಿದೆ ಎಂದು ಶುಕ್ರವಾರ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದರು.

ಬೆಟ್ಟಿಂಗ್‌ಗಾಗಿಯೇ ‘ಲೋಟಸ್’‌ ಎಂಬ ಆ್ಯಪ್‌ ಸಿದ್ಧಪಡಿಸಿದ್ದು, ಇದರ ಯೂಸರ್ ನೇಮ್‌, ಪಾಸ್‌ ವರ್ಡ್‌ ಪಡೆದುಲಾಗಿನ್ ಆಗಿ, ಬುಕ್ಕಿಗೆ ಹಣ ಕಳುಹಿಸಲಾಗಿದೆ. ₹10ಕ್ಕೆ 1 ಪಾಯಿಂಟ್‌ನಂತೆ ಬೆಟ್ಟಿಂಗ್ ನಡೆಸುತ್ತಿದ್ದರು. ಯಾವರೀತಿ ಹಣ ಸಂಪಾದನೆ ಮಾಡುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಲಕ್ಷಾಂತರ ರೂಪಾಯಿವ್ಯವಹಾರ ನಡೆದಿರುವ ಸಾಧ್ಯತೆ ಇದೆ. ದಾಳಿ ವೇಳೆ ದೊರೆತ ಪುಸ್ತಕದಲ್ಲಿ ₹500, ₹1,000
ಹಾಗೂ ಐದು ಸಾವಿರ ರೂಪಾಯಿ ಹಣ ಕಟ್ಟಿರುವ ಬಗ್ಗೆ ಮಾಹಿತಿ ಇದೆ. ಜತೆಗೆ 20 ಜನರ ಹೆಸರು ಪತ್ತೆಯಾಗಿದೆ.

ಬೆಂಗಳೂರಿನಲ್ಲಿರುವ ಬುಕ್ಕಿ ಪತ್ತೆಯಾದರೆ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು
ಹೇಳಿದರು.

ಬೆಟ್ಟಿಂಗ್‌ ಆನ್‌ಲೈನ್‌ ಆಗಿರುವುದರಿಂದ ಮಾಹಿತಿ ಸಿಗುವುದು ‌ಕಡಿಮೆ. ಇದರಲ್ಲಿ ಬುಕ್ಕಿಗೆ ಶೇಕಡಾ 5 ರಷ್ಟು ಹಣನೀಡಿದರೆ, ಉಳಿದವರಿಗೆ ಪಂದ್ಯ ಗೆದ್ದರೆ ಲಾಭ ಆಗುತ್ತಿತ್ತು ಎಂದು ವಿವರಿಸಿದರು.

20–25 ವರ್ಷದ ಯುವಕರು ಹೆಚ್ಚು ತೊಡಗಿದ್ದಾರೆ. ಮನೆಯವರು ಮಕ್ಕಳ ಮೇಲೆ ನಿಗಾ ಇಡಬೇಕು.
ಐಪಿಎಲ್‌ ಕ್ರಿಕೆಟ್‌ ಹೆಸರಿನಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿರುವ ಮಾಹಿತಿ ದೊರೆತರೆ ಪೊಲೀಸರಿಗೆ ತಿಳಿಸಬೇಕು.

ಬಾತ್ಮಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಎಸ್ಪಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT