ಬುಧವಾರ, ಮಾರ್ಚ್ 3, 2021
18 °C
ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ

ಪುಣ್ಯಸ್ಮರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ: ಗಣ್ಯರು ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯದಲ್ಲಿ ಯುವಜನರ ಪಾತ್ರ ಮಹತ್ತರವಾದದ್ದು, ಆದ್ದರಿಂದ ಯುವಜನರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಪಟ್ಟಣದ ಕಲ್ಮಠದಲ್ಲಿ ಲಿಂಗೈಕ್ಯ ರುದ್ರಮುನಿ ಮಹಾಶಿವಯೋಗಿಗಳವರ 61ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಸಂಗನಬಸವ ಸ್ವಾಮಿಗಳ ಸ್ಮರಣೋತ್ಸವ ಮತ್ತು ಮ.ನಿ.ಪ್ರ ಗುರುಸಿದ್ಧ ಸ್ವಾಮಿಜಿ ಪಟ್ಟಾಧಿಕಾರದ ಸವಿನೆನಪು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಡುಗಡೆಗೊಳಿಸಿ ಮಾತನಾಡಿದರು.

ಸಮಾಜವು ಆರೋಗ್ಯಕರವಾಗಿ ಏಳಿಗೆಯಾಗಬೇಕಾದರೆ, ಧಾನ, ಧರ್ಮಗಳು, ಧಾರ್ಮಿಕ ಕಾರ್ಯಗಳು ನಡೆಯಬೇಕು. ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಆಚಾರ ವಿಚಾರಗಳು ಯುವ ಪೀಳಿಗೆಗೆ ಪರಿಚಯ ಮಾಡಬೇಕು ಎಂದರು. ಇತ್ತಿಚೀನ ದಿನಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದನ್ನು ಕಂಡರೆ ಯುವಕರ ಚಿತ್ತ ಧರ್ಮದತ್ತ ವಾಲಿದೆ ಅನಿಸುತ್ತದೆ ಎಂದರು.

ಜ.22 ರಿಂದ ಜ.30 ರ ವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಜ.22 ರಂದು ಶುಕ್ರವಾರ ಸಂಜೆ 7.30ಕ್ಕೆ ಶರಣಧರ್ಮ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಲಿದೆ. ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗಿಶ್ವರ ಸ್ವಾಮೀಜಿ, ಗೋಲಗೇರಿ ಹಾಗೂ ಹಂಸಭಾವಿಯ ಸಿದ್ಧಲಿಂಗ ಸ್ವಾಮೀಜಿ, ಬೆಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಅಗಡಿ ಆನಂದವನದ ಗುರುದತ್ತ ಮೂರ್ತಿ ಸ್ವಾಮೀಜಿ ಉಪಸ್ಥಿತರಿರುವರು ಎಂದರು.

ಜ.28,29,30 ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಮಠಾಧೀಶರು ಭಾಗವಹಿಸಲಿದ್ದಾರೆ. ಪ್ರವಚನ, ಧರ್ಮಸಭೆ, ಸಂಗೀತ ಹಾಗೂ ರಥೋತ್ಸವ, ಅನುಭಾವ ಗೋಷ್ಠಿ, ಉಚಿತ ಆರೋಗ್ಯ ಶಿಬಿರ ಹೀಗೆ ಅನೇಕ ಕಾರ್ಯಕ್ರಮಗಳು ಜರುಗಲಿಗಲಿವೆ. ನಿಯಮದ ಪ್ರಕಾರ ಅಂತರ ಕಾಯ್ದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಭಾಗವಹಿಸಬೇಕು ಎಂದು ಕಲ್ಮಠದ ಗುರುಸಿದ್ಧ ಸ್ವಾಮಿಜಿ ಹೇಳಿದರು.

ಕಾರ್ಯಕ್ರಮದಲ್ಲಿ ಕೊಟ್ರಯ್ಯ ಕೊವಳ್ಳಿಮಠ, ಅಜ್ಜಪ್ಪ ತರ್ಲಿ, ಚನ್ನಪ್ಪ ಕಲಾಲ, ರಮೇಶ ಮಠದ, ಪುಟ್ಟಪ್ಪ ಕುರುಬಗೇರಿ, ಪರಮೇಶ ಹೇಮಗಿರಿಮಠ, ಶಿವಯೋಗಿ ಕಾಗಿನೆಲ್ಲಿ, ಮಂಜುನಾಥ ಯರವಿನತಲಿ, ಮುತ್ತಯ್ಯ ರಿತ್ತಿಮಠ, ಶಿವಕುಮಾರ ಕಬ್ಬಿಣದ, ಸಿದ್ದಪ್ಪ ಕಾಗಿನೆಲ್ಲಿ, ನಿಂಬಣ್ಣ ಅಂಗಡಿ, ಶಂಭುಲಿಂಗಯ್ಯ ಮಠದ, ಅಜ್ಜಯ್ಯ ರಿತ್ತಿಮಠ, ಶಿವಲಿಂಗೇಶ ಕುಂದೂರ, ಹಾಲೇಶ ಹಾಲಣ್ಣನವರ, ಗಂಗಯ್ಯ, ಪ್ರೇಮಕುಮಾರ ಬ್ಯಾಡಗಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು