ಹಾವೇರಿ: ಇಲ್ಲಿಯ ಜಯದೇವನಗರದಲ್ಲಿ ತಡರಾತ್ರಿ ಮನೆಯೊಂದರ ಬಾಗಿಲು ಬಡಿದಿದ್ದ ಮಹಿಳೆ ಹಾಗೂ ಜೊತೆಗಿದ್ದ ನಾಲ್ವರ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಯಲ್ಲಿ ಆರೋಗಪಿಗಳಿಗಾಗಿ ಶೋಧ ನಡೆಯುತ್ತಿದೆ.

ಜಯದೇವನಗರದ ಜಗದೀಶ ಎಂಬುವವರ ಮನೆಗೆ ಭಾನುವಾರ ರಾತ್ರಿ ಬಂದಿದ್ದ ಅಪರಿಚಿತ ಮಹಿಳೆ, ಬಾಗಿಲು ಬಡಿದಿದ್ದರು. ಜಗದೀಶ ಬಾಗಿಲು ತೆರೆಯುತ್ತಿದ್ದಂತೆ, ಮಹಿಳೆ ಸಹಾಯ ಕೇಳಿದ್ದರು. ಇದೇ ಸಂದರ್ಭದಲ್ಲಿ ಜಗದೀಶ, ಮಹಿಳೆ ಬಳಿ ಇರುವ ಚಾಕು ನೋಡಿ ಗಾಬರಿಯಾಗಿ ಬಾಗಿಲು ಹಾಕಿಕೊಂಡು ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು.

ಇದಾದ ನಂತರ ಮಹಿಳೆ ಹಿಂದೆಯೇ ನಾಲ್ವರು ಪುರುಷರು ಬಂದಿದ್ದರು. ಎಲ್ಲರೂ ಸೇರಿ ಬಾಗಿಲು ಬಡಿದಿದ್ದರು. ಗಾಬರಿಗೊಂಡಿದ್ದ ಜಗದೀಶ, ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದರು. ಅಷ್ಟರಲ್ಲೇ ಸ್ಥಳೀಯರು ಸಹ ಸ್ಥಳಕ್ಕೆ ಬಂದಿದ್ದರು. ಪೊಲೀಸ್ ಜೀಪು ಮನೆಯತ್ತ ಬರುತ್ತಿತ್ತು. ಜನ ಸೇರುವುದನ್ನು ಗಮನಿಸಿದ ಮಹಿಳೆ ಹಾಗೂ ನಾಲ್ವರು, ಸ್ಥಳದಿಂದ ಓಡಿಹೋಗಿದ್ದಾರೆ ಎಂಬುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಹಾವೇರಿ ಶಹರ ಠಾಣೆ ಪೊಲೀಸರು, ಮಹಿಳೆ ಹಾಗೂ ಇತರೆ ಪುರುಷರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಎಸ್ಪಿ ಲಕ್ಷ್ಮಣ ಶಿರಕೋಳ, ‘ಮಹಿಳೆ ಬಂದು ಬಾಗಿಲು ಬಡಿದಿದ್ದ ಬಗ್ಗೆ 112ಕ್ಕೆ ಮಾಹಿತಿ ಬಂದಿತ್ತು. ಸಿಬ್ಬಂದಿ ಸ್ಥಳಕ್ಕೆ ಹೋಗುವಷ್ಟರಲ್ಲೇ ಮಹಿಳೆ ಹಾಗೂ ಇತರರು ಸ್ಥಳದಿಂದ ಓಡಿಹೋಗಿದ್ದಾರೆ. ಇವರ ಪತ್ತೆಗಾಗಿ ವಿಶೇಷ ತಂಡ ತನಿಖೆ ನಡೆಸುತ್ತಿದೆ’ ಎಂದರು.

‘ಹಾವೇರಿ ನಗರ ಹಾಗೂ ಇತರೆ ಕಡೆಗಳಲ್ಲಿಯೂ ಅನುಮಾನಾಸ್ಪದ ಮಹಿಳೆ ಓಡಾಡಿರುವ ಬಗ್ಗೆ ಮಾಹಿತಿಯಿದೆ. ಹಾವೇರಿ ಮಾತ್ರವಲ್ಲದೇ ರಾಣೆಬೆನ್ನೂರು, ಬ್ಯಾಡಗಿ ಸೇರಿದಂತೆ ಹಲವು ಠಾಣೆ ವ್ಯಾಪ್ತಿಯಲ್ಲಿ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.