ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್ ಕಚೇರಿ ಮುಂಭಾಗದ ಜಂಕ್ಷನ್ ಅಭಿವೃದ್ಧಿ

ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ
Last Updated 3 ನವೆಂಬರ್ 2020, 16:01 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಪಾಸ್‌ಪೋರ್ಟ್ ಕಚೇರಿ ಮುಂಭಾಗದ ಜಂಕ್ಷನ್ ಅಭಿವೃದ್ಧಿ ಪಡಿಸಲು ಕ್ರಮವಹಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈಜೀಪುರ ಹಾಗೂ ಕೋರಮಂಗಲ ವಾರ್ಡ್‌ಗಳಲ್ಲಿ ಕಸ ವಿಲೇವಾರಿ, ರಸ್ತೆ ಅಭಿವೃದ್ಧಿ ಹಾಗೂ ಮಳೆ ನೀರು ಚರಂಡಿ ಕಾಮಗಾರಿಗಳನ್ನು ಅವರು ಮಂಗಳವಾರ ಪರಿಶೀಲನೆ ನಡೆಸಿದರು.

ಈಜೀಪುರ ವಾರ್ಡ್‌ನಲ್ಲಿ ಕೋರಮಂಗಲ 80 ಅಡಿ ರಸ್ತೆಯ ಪಕ್ಕದ ಮಳೆನೀರು ಚರಂಡಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಡಳಿತಾಧಿಕಾರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆದೇಶ ಮಾಡಿದರು.

‘ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ರಸ್ತೆ ಪಕ್ಕ ಬಿದ್ದಿರುವ ಕಸದ ರಾಶಿಗಳನ್ನು ತೆರವು ಮಾಡಬೇಕು. ಪಾಸ್‌ಪೋರ್ಟ್ ಕಚೇರಿ ಜಂಕ್ಷನ್ ಬಳಿ ಪಾದಚಾರಿ ಮಾರ್ಗದಲ್ಲಿ ನಿಂತಿರುವ ಹಳೆಯ ವಾಹನಗಳನ್ನು ತೆರವುಗೊಳಿಸಬೇಕು. ಫುಟ್‌ಪಾತ್‌ಗೆ ಕರ್ಬ್ ಸ್ಟೋನ್‌ಗಳನ್ನು ಅಳವಡಿಸಿ ಜನರು ಸುಗಮವಾಗಿ ಓಡಾಡಲು ಅನುವು ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ಕಸ–ರಸ ಘಟಕ ತಪಾಸಣೆ

ಕೋರಮಂಗಲ ವಾರ್ಡ್‌ನಲ್ಲಿರುವ ಕಸ–ರಸ ಘಟಕಕ್ಕೆ ಭೇಟಿ ನೀಡಿದ ಆಡಳಿತಾಧಿಕಾರಿ ಜೈವಿಕ ಅನಿಲ ಘಟಕ, ಕಸ-ರಸ ಘಟಕ, ಥರ್ಮಕೋಲ್ ಹಾಗೂ ಹಾಸಿಗೆ ಮರುಬಳಕೆ ಘಟಕ, ಒಣ ಕಸ ಸಂಗ್ರಹಣಾ ಘಟಕ, ಜೈವಿಕ ಅನಿಲ ಕಂಟೈನರ್ ಘಟಕಗಳನ್ನು ಪರಿಶೀಲನೆ ನಡೆಸಿದರು.

‘ನಿತ್ಯ 5 ಟನ್ ಕಸ ಬಳಸುವ ಸಾಮರ್ಥ್ಯವನ್ನು ಜೈವಿಕ ಅನಿಲ ಘಟಕ ಹೊಂದಿದೆ. ಸದ್ಯ 3.50 ಟನ್‌ಗಳಷ್ಟು ಹಸಿ ಕಸವನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಇದರಿಂದ ಉತ್ಪತ್ತಿ ಆಗುವ ವಿದ್ಯುತ್ ಅನ್ನು ಬೀದಿ ದೀಪಗಳನ್ನು ಬೆಳಗಿಸಲು ಬಳಸಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಥರ್ಮಾಕೋಲ್ ಘಟಕಕ್ಕೆ ನಿತ್ಯ 500ಕೆ.ಜಿ.ಯಿಂದ 1 ಟನ್ ಥರ್ಮಕೋಲ್ ಶೀಟ್‌ಗಳು ಬರುತ್ತಿವೆ. ಅವುಗಳನ್ನು ಕರಗಿಸಿ ಫೋಟೊ ಫ್ರೇಮ್‌ ಮತ್ತಿತರ ಪರಿಕರಗಳನ್ನು ತಯಾರಿಸುವ ಕಚ್ಛಾವಸ್ತುವಾಗಿ ಮರುಬಳಕೆ ಮಾಡಬಹುದು.ಇಲ್ಲಿನ ಒಣ ಕಸ ಸಂಗ್ರಹಣಾ ಕೇಂದ್ರಕ್ಕೆ ನಿತ್ಯ 2ಟನ್‌ನಿಂದ 3 ಟನ್ಗಳಷ್ಟು ಕಸ ಬರುತ್ತದೆ. ಜೈವಿಕ ಅನಿಲ ಘಟಕದಲ್ಲಿ ಉತ್ಪತ್ತಿಯಾಗುವ ಅನಿಲವನ್ನು ಹೋಟೆಲ್‌ಗಳಿಗೆ ಪೂರೈಸಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT