ಕಲಬುರಗಿ: ಕಳೆದ ವರ್ಷ ಡಿಸೆಂಬರ್ 4ರಂದು ನಗರದ ಖಾಸಗಿ ಮಹಿಳಾ ಕಾಲೇಜಿನ ವಸತಿನಿಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರು ನಗರ ಪೊಲೀಸ್ ಆಯುಕ್ತರಿಗೆ ಕೊಲೆ ದೂರು ಸಲ್ಲಿಸಿದ್ದಾರೆ.

ಆಳಂದ ಪಟ್ಟಣದ ನಿವಾಸಿ ಬಾಷಾ ಅವರ ಪುತ್ರಿ ನಮೀರಾ ಸವೃತ ಕಳೆದ ವರ್ಷ ಕಲಬುರಗಿಯ ವಸತಿನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಡಿ.12ರಂದು ನಾನು ಕಾಲೇಜಿಗೆ ಬಂದು ಮಗಳನ್ನು ಆಳಂದಕ್ಕೆ ಕರೆದುಕೊಂಡು ಹೋಗಿ, ಡಿ.4ರಂದು ಮತ್ತೆ ಬಸ್ಸಿನ ಮುಖಾಂತರ ಕಲಬುರಗಿಗೆ ಕಳುಹಿಸಿರುತ್ತೇನೆ. ಬೆಳಿಗ್ಗೆ 10ಕ್ಕೆ ನನ್ನ ಮೊಬೈಲ್ಗೆ ಕರೆ ಮಾಡಿ ವಸತಿನಿಲಯಕ್ಕೆ ಮುಟ್ಟಿದ್ದೇನೆ ಎಂದು ಹೇಳಿದ್ದಳು. ಕೆಲವೇ ಗಂಟೆಗಳ ಬಳಿಕ ಮಧ್ಯಾಹ್ನ 3.34ಕ್ಕೆ ಕಾಲೇಜಿನ ಪ್ರಾಚಾರ್ಯರು ಕರೆ ಮಾಡಿ ನಿಮ್ಮ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದರು. ನಾವು ವಸತಿ ನಿಲಯಕ್ಕೆ ಹೋಗಿ ಪ್ರಾಚಾರ್ಯರಿಗೆ ವಿಚಾರಿಸಿದಾಗ ನಿಮ್ಮ ಮಗಳು ರೂಮಿನ ಒಳಗಿನಿಂದ ಬಂದ್ ಮಾಡಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದರು. ಈ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ವಸತಿ ನಿಲಯದಲ್ಲಿ 600 ವಿದ್ಯಾರ್ಥಿನಿಯರು ಇದ್ದು, ಒಂದು ಕೋಣೆಯಲ್ಲಿ 4ರಿಂದ 5 ವಿದ್ಯಾರ್ಥಿನಿಯರು ಇಟ್ಟಿರುತ್ತಾರೆ. ವಸತಿನಿಲಯಕ್ಕೆ ಒಬ್ಬರು ವಾರ್ಡನ್, ವಾಚ್ಮನ್ ಇದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಕೋಣೆ 11 ಅಡಿ ಎತ್ತರವಿದ್ದು ಕುರ್ಚಿ ಮೇಲೆ ನಿಂತು ಓಡಣಿ ಹಾಕಲು ನಿಲುಕುವುದಿಲ್ಲ. ಇದರಿಂದ ಕೊಲೆ ಸಂಶಯ ಇದ್ದು, ವಸತಿನಿಲಯದ ಸಿ.ಸಿ ಟಿವಿ ಕ್ಯಾಮೆರಾ ತಪಾಸಣೆ ಮಾಡಬೇಕು. ಉನ್ನತ ಮಟ್ಟದ ತನಿಖೆ ಮಾಡಿ ಮಗಳ ಸಾವಿಗೆ ನ್ಯಾಯ ಒದಗಿಸಬೇಕು’ ಎಂದು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಮರುದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.