ಶನಿವಾರ, ಮೇ 8, 2021
17 °C

ಕಲ್ಲು ಎತ್ತಿ ಹಾಕಿ ಯುವಕನ ಕೊಲೆ: ಉದ್ರಿಕ್ತ ಗುಂಪಿನಿಂದ ಕಾರು, ಬೈಕ್ ಪುಡಿ ಪುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಸೇಡಂ ರಸ್ತೆಯ ಜಿಮ್ಸ್ ಆಸ್ಪತ್ರೆ ಎದುರು ಉದ್ರಿಕ್ತ ಯುವಕರ ಗುಂಪೊಂದು ವೀರತಾ ಉಪಾಧ್ಯ (30) ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಸೋಮವಾರ ‌ಸಂಜೆ ಕೊಲೆ ಮಾಡಿದೆ. 

ಈ ಕೊಲೆಗೆ ಸುಂದರ ನಗರದ ಯುವಕರೇ ಕಾರಣ ಎಂಬ ದ್ವೇಷದಿಂದ 200 ಯುವಕರ ತಂಡ ಕೈಯಲ್ಲಿ ತಲವಾರ್, ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ದುಂಡಾವರ್ತಿ ತೋರಿದ್ದು, ಮೂರು ಕಾರು, ಹತ್ತಾರು ಬೈಕ್ ಸ್ಕೂಟರ್ ಗಳನ್ನು ಪುಡಿ ಪುಡಿ ಮಾಡಿ ಪರಾರಿಯಾಗಿದೆ.


ಘಟನೆಯಲ್ಲಿ ಹಾನಿಗೀಡಾಗಿರುವ ಕಾರು 

ಹೋಳಿ ನಿಮಿತ್ತ ಬಣ್ಣ ಆಡಿದ್ದ ಗುಂಪು ಪಾನಮತ್ತರಾಗಿದ್ದರು. ಈ ಸಂದರ್ಭದಲ್ಲಿ ಮಹಾದೇವಿ ಒಂಟಿ ಎಂಬ ವೃದ್ಧ ಮಹಿಳೆಯ‌ ಮನೆ ಹೊಕ್ಕು ಕಟ್ಟಿಗೆಯಿಂದ ಹೊಡೆದು ಗಾಯ ಮಾಡಿದ್ದಾರೆ. 

ಉದ್ರಿಕ್ತ ತಂಡದಿಂದ ತಪ್ಪಿಸಿಕೊಳ್ಳಲು ನಿವಾಸಿಗಳು‌ ಮನೆಯ ಬಾಗಿಲು ಭದ್ರಪಡಿಸಿಕೊಂಡು ಕಾಟ್ ಕೆಳಗಡೆ ಅವಿತು ಕುಳಿತಿದ್ದರು.

ಹಲವು ಮನೆಗಳ ಗಾಜು ಒಡೆದಿದ್ದು, ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. 50ಕ್ಕೂ ಅಧಿಕ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. 

ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು