ಕಲಬುರಗಿ: ‘ಭಾರತದ ವಿದೇಶಾಂಗ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಯಾಕೆ ಡಿಕ್ಟೇಟ್ ಮಾಡುತ್ತಿದ್ದಾರೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಭಾರತ–ಪಾಕ್ ನಡುವಣ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಬಗೆಗೆ ಅಮೆರಿಕದ ಡೊನಾಲ್ಡ್ ಟ್ರಂಪ್ ಮೂರ್ನಾಲ್ಕು ಸಲ ಹೇಳಿದ್ದಾರೆ. ಭಾರತಕ್ಕೂ ಭಯೋತ್ಪಾದಕ ರಾಷ್ಟ್ರ ಪಾಕ್ಗೂ ಹೋಲಿಸಿ ಹಗುರವಾಗಿ ಮಾತನಾಡುತ್ತಿದ್ದಾರೆ. ಪ್ರತಿ ಸಲವೂ ಟಂಪ್ ಭಾಷಾ ಬಳಕೆ ಹಗುರವಾಗುತ್ತಲೇ ಇದೆ. ಟ್ರಂಪ್ ಹೇಳಿಕೆಗಳ ಬಗೆಗೆ ಪ್ರಧಾನಿ ಯಾಕೆ ಮೌನವಹಿಸಿದ್ದಾರೆ, ಯಾಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಈ ಸಂಬಂಧ ಕೂಡಲೇ ಪ್ರಧಾನಿ ಸರ್ವಪಕ್ಷ ಸಭೆ ಕರೆಯಬೇಕು. ಸಂಸತ್ತಿನ ವಿಶೇಷ ಅಧಿವೇಶನ ನಡೆಸಿ ಜನರಿಗೆ ವಿಷಯ ತಿಳಿಸಬೇಕು’ ಎಂದು ಒತ್ತಾಯಿಸಿದರು.

‘ಮೇ 13ರಂದು ಪ್ರಧಾನಿ ನರೇಂದ್ರ ಮೋದಿ ಆದಂಪುರ ವಾಯುನೆಲೆಗೆ ಭೇಟಿ ಸೈನಿಕರ ಆತ್ಮಸ್ಥೈರ್ಯ ತುಂಬಿದ್ದು ಸ್ವಾಗತಾರ್ಹ. ಸೈನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದು, ಆತ್ಮಸ್ಥೈರ್ಯ ತುಂಬುವುದು ಪ್ರಧಾನಿಯಾಗಿ ಅವರ ಜವಾಬ್ದಾರಿ. ಆದರೆ, ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದಿದ್ದು ಏಪ್ರಿಲ್ 22ರಂದು. ದೇಶದ ಸೈನಿಕರ ಆತ್ಮಸೈರ್ಯ ಹೆಚ್ಚಿಸುವ ಬದಲು, ಪ್ರಧಾನಿ ಪ್ರತ್ಯಕ್ಷರಾಗಿದ್ದು ಬಿಹಾರ್ ಚುನಾವಣಾ ರ್ಯಾಲಿಯಲ್ಲಿ. ಅಂದಿನಿಂದ ಈತನಕ ಪ್ರಧಾನಿ ಎಲ್ಲಿದ್ದರು? ಎರಡು ದಿನಗಳ ಹಿಂದೆ ಮನ್ ಕೀ ಬಾತ್ನ ಟೆಲಿವರ್ಸನ್ ಎಂಬಂತೆ ರಾಷ್ಟ್ರ ಉದ್ದೇಶಿಸಿ ಮಾತನಾಡಿದರು. ಈಗ ಆದಂಪುರಗೆ ಹೋಗಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.