ಶುಕ್ರವಾರ, ಮೇ 27, 2022
26 °C
ಕಡಿಮೆಯಾಗದ ನಿಂಬೆ ‘ಹುಳಿ’, ಹಣ್ಣುಗಳ ಬೆಲೆ ಸ್ಥಿರ

ಕಲಬುರಗಿ: ಟೊಮೆಟೊ ದರ ಏರಿಕೆ, ಸೊಪ್ಪು ಪೂರೈಕೆ ಕುಸಿತ

ಕಿರಣ ನಾಯ್ಕನೂರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಟೊಮೊಟೊ ದರ ಕಳೆದ ವಾರ ಏಕಾಏಕಿ ಏರಿಕೆಯಾಗಿದೆ. ಕಳೆದ ವಾರ ಪ್ರತಿ ಕೆ.ಜಿಗೆ ₹60–80 ನಂತೆ ಮಾರಾಟವಾಗಿದ್ದ ಟೊಮೊಟೊ ಬೆಲೆ ಸದ್ಯ ₹50 ರಿಂದ ₹60 ಇದೆ.

ಮಹಾರಾಷ್ಟ್ರ, ಬೀದರ್‌ಗಳಿಂದ ಜಿಲ್ಲೆಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮೆಟೊ ಪೂರೈಕೆಯಾಗುತ್ತಿತ್ತು. ಆದರೆ ಕಳೆದ ವಾರ ಮಳೆ, ಬಿರುಗಾಳಿ ಪರಿಣಾಮ ಆವಕ ಕುಸಿತವಾಗಿದ್ದರಿಂದ ಬೆಲೆ ಹೆಚ್ಚಳವಾಗಿತ್ತು ಎನ್ನುತ್ತಾರೆ ಸಗಟು ವ್ಯಾಪಾರಸ್ಥರು.

ಮೆಣಸಿನಕಾಯಿ ಬೆಲೆ ಈ ವಾರವೂ ಕಡಿಮೆಯಾಗಿಲ್ಲ. ಪ್ರತಿ ಕೆ.ಜಿಗೆ ₹60 ರಿಂದ ₹70ನಂತೆ ಮಾರಲಾಗುತ್ತಿದೆ. ಈರುಳ್ಳಿ ಕಳೆದ ವಾರದಂತೆ ಈವಾರವೂ ₹10–15 ಕೆ.ಜಿನಂತೆ ಮಾರಾಟವಾಗುತ್ತಿದ್ದರೆ ಆಲೂಗಡ್ಡೆ ಬೆಲೆ ₹20–30 ಇದೆ. ಈ ವಾರ ಗಜ್ಜರಿ ದರ ₹40–50 ಇದ್ದರೆ ಪ್ರತಿ ಕೆ.ಜಿಗೆ ₹60 ನಂತೆ ಬೀನ್ಸ್‌ ಖರೀದಿಸಲಾಗುತ್ತಿದೆ. ಬದನೆಕಾಯಿ, ಹೀರೆಕಾಯಿ, ಬೆಂಡೆಕಾಯಿಗಳ, ಚವಳೆಕಾಯಿಗಳನ್ನು ₹30–40 ನಂತೆ ಮಾರಲಾಗುತ್ತಿದೆ. ಡೊಣ ಮೆಣಸಿನಕಾಯಿ ಬೆಲೆ ₹50–60 ಇದೆ.

ಪ್ರತಿ ಕೆ.ಜಿ ಬೀಟ್‌ರೂಟ್‌, ಎಲೆಕೋಸುಗಳ ಬೆಲೆ ಕ್ರಮವಾಗಿ ₹70, ₹60 ಇದ್ದು ಗಡ್ಡೆಗಳ ಲೆಕ್ಕದಲ್ಲಿಯೂ ಮಾರಲಾಗುತ್ತಿದೆ.

ಸೊಪ್ಪುಗಳ ಪೂರೈಕೆ ಕುಸಿತ: ಈ ವಾರ ಮಾರುಕಟ್ಟೆಗೆ ಸೊಪ್ಪು ಹೆಚ್ಚು ಆವಕವಾಗಿಲ್ಲ, ಹೀಗಾಗಿ ಬೆಲೆ ಹೆಚ್ಚಾಗಿದೆ.

ಮೆಂತೆ, ಕೊತ್ತಂಬರಿ, ಸಬ್ಬಸಗಿ, ಪಾಲಕ್, ಈರುಳ್ಳಿ ಸೊಪ್ಪು ಸೇರಿ ಬಹುತೇಕ ಸೊಪ್ಪುಗಳ ಬೆಲೆ ಕಟ್ಟಿಗೆ ₹10 ಇದೆ (ಗಾತ್ರದ ಆಧಾರದಲ್ಲಿ). ನಿಂಬೆ ಹಣ್ಣುಗಳ ಬೆಲೆ ಈ ವಾರವೂ ಇಳಿಕೆಯಾಗಿಲ್ಲ. ಹಣ್ಣುಗಳ ಬೆಲೆ ಸ್ಥಿರವಾಗಿದೆ.

ಚಿಕನ್, ಮಟನ್‌ ಕಳೆದ ವಾರದ ದರದಲ್ಲೇ ಮಾರಾಟವಾಗುತ್ತಿದೆ. ‘ರಂಜಾನ್‌ ಮಾಂಸ ಮುಗಿದ್ದಿದ್ದರಿಂದ ಮಾಂಸ ಮಾರಾಟದಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು ಬೆಲೆ ಏರಿಕೆಯಾಗಿಲ್ಲ’ ಎಂದು ಮಾಂಸ ಮಾರಾಟಗಾರ ರಿಯಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು