ಕೋಲಾರ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರಿಂದ ಡ್ರೋನ್ ಗಸ್ತು
ನಿಖಿಲ್ ಬಿ.
ಅಪರಾಧ ಪ್ರಕರಣ ತಡೆಗೆ ಅನುಕೂಲ
ಅಪರಾಧ ಪ್ರಕರಣ ತಡೆಗೆ ಅನುಕೂಲ ದುರ್ಗಮ ಪ್ರದೇಶ ದಟ್ಟ ಕಾಡು ಬೆಟ್ಟ ಗುಡ್ಡಗಳ ತಪ್ಪಲು ಜನಸಂದಣಿ ಪ್ರದೇಶಗಳಲ್ಲಿ ನಡೆಯುವ ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ಡ್ರೋನ್ ಪೆಟ್ರೋಲಿಂಗ್ ನೆರವಾಗಲಿದೆ. ಇಂಥ ಪ್ರದೇಶದಲ್ಲಿ ಯಾರೂ ಬರಲ್ಲವೆಂದು ಜೂಜಾಡುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಕೆಲವರು ನಿರತರಾಗುತ್ತಾರೆ. ಅವರಿಗೆ ಕಡಿವಾಣ ಹಾಕಬಹುದು. ದಾಳಿ ವೇಳೆ ಪರಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಕ್ಷಣ ಡ್ರೋನ್ ಬಳಿಸಿ ಆರೋಪಿಗಳ ಮುಖಚರ್ಯೆ ಕಂಡುಹಿಡಿಯಬಹುದು ಎಲ್ಲಿ ಪರಾರಿಯಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು. ಪೊಲೀಸರು ಹೋಗಲು ಸಾಧ್ಯವಾಗದಂಥ ಪ್ರದೇಶದಲ್ಲಿ ಈ ಡ್ರೋನ್ ಮೂಲಕ ಪರಿಶೀಲನೆ ನಡೆಸಬಹುದು. ಕೈಗಾರಿಕಾ ಪ್ರದೇಶ ಸಂಪೂರ್ಣ ಪರಿಶೀಲಿಸಬಹುದು. ಸಾವಿರಾರು ಜನ ಸೇರುವ ಕಾರ್ಯಕ್ರಮಗಳಲ್ಲಿ ಪೊಲೀಸ್ ಬಂದೋಬಸ್ತ್ ಜೊತೆಗೆ ಡ್ರೋನ್ ಮೂಲಕವೂ ಕಣ್ಣಿಡಬಹುದು. ಅಪರಾಧ ಚಟುವಟಿಕೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಡ್ರೋನ್ ಹಾರಿಸಿ ಆರೋಪಿಗಳ ಚಲನವಲನ ಗುರುತಿಸಬಹುದು. ಮೊದಲ ಬಾರಿ ಈ ವ್ಯವಸ್ಥೆ ಜಾರಿ ಮಾಡಿದ್ದು ನಮ್ಮನ್ನು ನೋಡಿ ವಿವಿಧೆಡೆ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. -ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಲಾರ
8 ಪೊಲೀಸರಿಗೆ ತರಬೇತಿ
ಈಗಾಗಲೇ ಕೋಲಾರ ಜಿಲ್ಲಾ ಪೊಲೀಸರು ಕೆಲ ದಿನಗಳಿಂದ ವಿವಿಧೆಡೆ ಮೂರು ಡ್ರೋನ್‌ಗಳ ಮೂಲಕ ಗಸ್ತು ನಡೆಸುತ್ತಿದ್ದಾರೆ. ಅದಕ್ಕೆಂದು 8 ಕಾನ್‌ಸ್ಟೆಬಲ್‌ಗಳಿಗೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಒಂದು ದಿನ ಡ್ರೋನ್ ಬಳಸಿ ಪರಿಶೀಲನೆ ನಡೆಸುತ್ತಿದ್ದಾರೆ. 112 ಸಂಖ್ಯೆಯಿಂದ ಸಾರ್ವಜನಿಕರಿಂದ ದೂರು ಬಂದಾಗಲೂ ತಕ್ಷಣವೇ ಡ್ರೋನ್‌ಗಳ ಮೂಲಕ ಕಾರ್ಯಾಚರಣೆ ನಡೆಸಿ ಅಪರಾಧ ತಡೆಗೆ ಮುಂದಾಗುತ್ತಿದ್ದಾರೆ.