ಕುಷ್ಟಗಿ: ಶಿಕ್ಷಣ ಕ್ಷೇತ್ರದ ಬೆಳವಣಿಗೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿ ವಿಷಯದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿರುವ ತಾಲ್ಲೂಕಿನ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಲಿಂಗದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಆನಂದ ಸೊಬಗಿನ, ವಿಠಲಾಪುರ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶರಬಣ್ಣ ಬಿಜಕಲ್ ಮತ್ತು ಕಂದಕೂರು ಪ್ರೌಢಶಾಲೆಯ ಶಿಕ್ಷಕ ಬಸವರಾಜ ಗುರಿಕಾರ ಪ್ರಶಸ್ತಿಗೆ ಆಯ್ಕೆಯಾದವರು. ಕೊಪ್ಪಳದಲ್ಲಿ ಸೆ.6ರಂದು ಜಿಲ್ಲಾಡಳಿತ ಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಆನಂದ ಸೊಬಗಿನ ಲಿಂಗದಹಳ್ಳಿಯ ಶಾಲೆಯ ಅಚ್ಚುಮೆಚ್ಚಿನ ಶಿಕ್ಷಕ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್ಡೇಟ್ ಆಗಿರುವ ಆನಂದ ಅವರು ಶಿಕ್ಷಣ ಇಲಾಖೆ, ಇತರೆ ಶಿಕ್ಷಕರು ಮತ್ತು ಸಮುದಾಯದ ಸಹಕಾರದೊಂದಿಗೆ ಬೋಧನೆಯಲ್ಲಿ ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಶಾಲೆಯ ಒಳನೋಟವಷ್ಟೇ ಅಲ್ಲ ಬಾಹ್ಯದಲ್ಲೂ ಗಮನ ಸೆಳೆಯುವಲ್ಲಿ ಈ ಶಿಕ್ಷಕರದು ಮುಖ್ಯ ಪಾತ್ರ. ಖಾಸಗಿ ಸಂಸ್ಥೆಯೊಂದರ ಅಂದಾಜು ₹70 ಲಕ್ಷ ಆರ್ಥಿಕ ನೆರವಿನೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಬಹಳಷ್ಟು ಮಕ್ಕಳು ಎನ್ಎನ್ಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐದು ವರ್ಷಗಳವರೆಗೆ ಪ್ರತಿವರ್ಷ ತಲಾ ₹12 ಸಾವಿರದಂತೆ ಶಿಷ್ಯವೇತನಕ್ಕೆ ಅರ್ಹತೆ ಪಡೆದಿರುವುದು ಮತ್ತೊಂದು ವಿಶೇಷ. ‘ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು, ಭವಿಷ್ಯದಲ್ಲಿ ಅವರೂ ನಾಡಿಗೆ ಉತ್ತಮ ಕೊಡುಗೆ ನೀಡುವಂತಾಗಲಿ ಎಂಬ ಆಶಯ, ತುಡಿತ ಆನಂದ ಅವರದು’ ಎನ್ನುತ್ತಾರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಿಂಗಪ್ಪ ಗುನ್ನಾಳ.

ಶರಬಣ್ಣ ಬಿಜಕಲ್, ವಿಠಲಾಪುರ ಕಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕ. ಪಾಠ, ಆಟದ ಜೊತೆಗೆ ಮಕ್ಕಳಲ್ಲಿ ಕಲಿಕೆಯಲ್ಲಿ ಉತ್ಸಾಹ ಮತ್ತು ಉಲ್ಲಸಿತರಾಗಿರುವುದಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತ ಬಂದಿದ್ದಾರೆ. ಮಕ್ಕಳು ಶಾಲೆಯಿಂದ ಹೊರಗೆ ಉಳಿಯದ ಶೈಕ್ಷಣಿಕ ಮುಖ್ಯವಾಹಿನಿಗೆ ಬರಬೇಕು ಎನ್ನುವ ಕಳಕಳಿ ಹೊಂದಿರುವ ಶರಬಣ್ಣ ಮನೆ ಮನೆಗೆ ಹೋಗಿ ಪಾಲಕರು, ಮಕ್ಕಳ ಮನಪರಿರ್ತಿಸಿ ಪುನಃ ಶಾಲೆಗೆ ಕರೆತಂದು ಹಾಜರಾತಿ ಹೆಚ್ಚಿಸುವಲ್ಲಿ ಮಾದರಿ ಪ್ರಯತ್ನ ಮಾಡುತ್ತ ಬಂದವರು. ಸರ್ಕಾರದಿಂದ ಬಂದಿರುವ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯ ಮೂಲಕ ಪಾಠ ಬೋಧನೆಯಲ್ಲಿ ತೊಡಗಿ ಮಕ್ಕಳಲ್ಲಿ ಆಸಕ್ತಿ ಅರಳಿಸುವಲ್ಲಿ ಮುತುವರ್ಜಿ ವಹಿಸುತ್ತಿದ್ದಾರೆ ಎನ್ನುತ್ತಾರೆ ಅವರ ಸಹವರ್ತಿ ಶಿಕ್ಷಕರು. ಪಾಠವಷ್ಟೇ ಅಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ದೈಹಿಕವಾಗಿಯೂ ಸದೃಢಗೊಳಿಸವಲ್ಲಿ ಪ್ರಯತ್ನಿಸುತ್ತಿದ್ದಾರೆ. ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಿ ಅನೇಕ ಮಕ್ಕಳು ವಸತಿ ಶಾಲೆಗೆ ಪ್ರವೇಶ ಪಡೆಯುವಲ್ಲಿ ಈ ಶಿಕ್ಷಕರ ಪ್ರಯತ್ನ ಮೆಚ್ಚುವಂಥದ್ದು.

ಬಸವರಾಜ ಗುರಿಕಾರ ಕಂದಕೂರಿನ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ. ಮೂರು ದಶಕಗಳಿಂದಲೂ ಶಿಕ್ಷಕ ಸೇವೆಯಲ್ಲಿದ್ದಾರೆ. ಮೂಲತಃ ಬಡ ಕುಟುಂಬದಲ್ಲಿ ಬೆಳೆದ ಬಸವರಾಜ ಅಂಥ ಕಷ್ಟಗಳು ತಮ್ಮ ಕಣ್ಮುಂದಿರುವ ಮಕ್ಕಳಿಗೆ ಬರಬಾರದು ಎಂದು ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಪ್ರತಿವರ್ಷ ರಾಷ್ಟ್ರೋತ್ಥಾನ ಸಂಸ್ಥೆಯವರು ನಡೆಸುವ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡಿ ಅನೇಕ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯುವಂತೆ ನೋಡಿಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಸಾಧನೆಗೈದಿದ್ದಾರೆ. ಕಬ್ಬಿಣದ ಕಡಲೆ ಅಂತಿರುವ ಇಂಗ್ಲಿಷ್ ಅನ್ನು ಹಿಂದುಳಿದ ಮಕ್ಕಳಿಗೂ ಮನಮುಟ್ಟುವ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್ಗಳನ್ನು ಬಳಸಿಕೊಂಡು ಬೋಧನೆಯ ವಿವಿಧ ವೈವಿಧ್ಯಮಯ ಕೌಶಲಗಳನ್ನು ಬಳಸಿಕೊಂಡು ಮಕ್ಕಳಿಗೆ ಆತ್ಮಸ್ಥೈರ್ಯದ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಹಿತ ತರಗತಿಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಮಕ್ಕಳಲ್ಲಿ ಶಿಸ್ತು, ಸಹನೆ, ಶಾಂತಿ, ಸಹಬಾಳ್ವೆ, ರಾಷ್ಟ್ರಪ್ರೇಮ, ಭಾವೈಕ್ಯ, ಸಹೋದರತ್ವ ಮೂಡಿಸುವ ನಿಟ್ಟಿನಲ್ಲಿ ಒಬ್ಬ ಸ್ಕೌಟ್ ಮಾಸ್ಟರಾಗಿಯೂ ಉತ್ತಮ ಪ್ರಯತ್ನ ಮಾಡಿದ್ದಾರೆ.

ಕೇವಲ ಶಾಲಾ ಅವಧಿಯಲ್ಲಷ್ಟೇ ಅಲ್ಲ ನಂತರವೂ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಉತ್ತಮ ಫಲಿತಾಂಶ ದೊರಕಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎನ್ನುತ್ತಾರೆ ಮಕ್ಕಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.