ಗಂಗಾವತಿ: ‘ಶಾಸಕರಿಲ್ಲದೆ ಗಂಗಾವತಿ ಕ್ಷೇತ್ರ ಅನಾಥವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನಾವಿದ್ದೇವೆ. ಜನರು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕೆಡಿಪಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವೆಂಕಟಗಿರಿ ಗ್ರಾಮಕ್ಕೆ ಮಂಜೂರಾಗಿದ್ದ ಸಮುದಾಯ ಆರೋಗ್ಯ ಕೇಂದ್ರ ರದ್ದು ಮಾಡಿಸಿ ಮಹಾನ್ ಕೆಲಸ ಮಾಡಿದ್ದಾರೆ’ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿಯ ಮಂಥನ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ,‘ಸಿಬಿಐ ಪ್ರಕರಣದ ಭಾಗವಾಗಿ ನಾನು ಒಂದು ತಿಂಗಳು ಕ್ಷೇತ್ರದಲ್ಲಿ ಇರಲಿಲ್ಲ. ಆಗ ಸಿಎಂ, ಇಲ್ಲಿನ ಸಚಿವರು ಸೇರಿ ಇತರ ನಾಯಕರು ಗಂಗಾವತಿಯಲ್ಲಿ ಚುನಾವಣೆ ಮಾಡಿಯೇ ಬಿಡಬೇಕು ಎಂದು ಪಣತೊಟ್ಟಿದ್ದರು. ಜಾಮೀನು ದೊರತ ಕೂಡಲೇ ಎಲ್ಲರೂ ತಣ್ಣಗಾದರು’ ಎಂದರು.

‘ಸರ್ಕಾರ ರಚನೆಯಾಗಿ 2 ವರ್ಷಗಳಾಗುತ್ತಿವೆ. ಅವರ ಹಣೆ ಬರಹಕ್ಕೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲು ಆಗುತ್ತಿಲ್ಲ. ವಾಲ್ಮೀಕಿ ನಿಗಮದ ಹಗರಣದ ನಂತರ ಆ ಖಾತೆಯನ್ನು ಸಿಎಂ ಸಿದ್ದರಾಮಯ್ಯನವರೇ ಇರಿಸಿಕೊಂಡಿದ್ದಾರೆ. ಆಹಿಂದ ನಾಯಕ ಎಂದು ಬಿಂಬಿಸಿಕೊಳ್ಳುವ ಅವರು ವಾಲ್ಮೀಕಿ ಸಮುದಾಯಕ್ಕೆ ಈವರೆಗೂ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ’ ಎಂದು ಆರೋಪಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ ಮಾತನಾಡಿ,‘ಪ್ರಸಕ್ತ ಸಾಲಿನಲ್ಲಿ ಶಾಲಾ ಕೊಠಡಿಗಳ ದುರಸ್ತಿ, ಶೌಚಾಲಯ ವ್ಯವಸ್ಥೆ ಕಲ್ಪಿಸಿ ಎಂದು ತಾ.ಪಂ ಇಒ ಅವರಿಗೆ ಮನವಿ ಮಾಡಲಾಗಿದೆ. ಬಹುತೇಕ ಕಟ್ಟಡಗಳ ಸ್ಲ್ಯಾಬ್ ಕಳಪೆ ಗುಣಮಟ್ಟದಿಂದ ಕೂಡಿದ ಕಾರಣ ಮೇಲ್ಛಾವಣಿಗಳು ಬೇಗ ಕುಸಿಯುತ್ತಿವೆ. ಹಾಗಾಗಿ ಶಾಲೆಗಳಿಗೆ ಶೀಟ್ ಹಾಕಿಸಲಾಗುತ್ತಿದೆ ಎಂದು ಇಒ ತಿಳಿಸಿದ್ದಾರೆ’ ಎಂದರು.

‘ಗಂಗಾವತಿ, ಕೊಪ್ಪಳ ಅರಣ್ಯ ಅಧಿಕಾರಿ ಸುಭಾಷ ಚಂದ್ರ ನಾಯಕ, ಸ್ವಾತಿ ಮಾತನಾಡಿ,‘ಅಂಜನಾದ್ರಿ, ಇರಕಲಗಡ ಭಾಗದಲ್ಲಿ ಕರಡಿ ಮತ್ತು ಚಿರತೆ ಹಾವಳಿ ಹೆಚ್ಚಿದೆ. ಇಲ್ಲಿ ಸೆರೆ ಹಿಡಿದ ಪ್ರಾಣಿಗಳನ್ನು ಮೊದಲು ದಾಂಡೇಲಿ ಭಾಗದಲ್ಲಿ ಬಿಡಲಾಗುತ್ತಿತ್ತು. ಅಲ್ಲಿನ ಅಧಿಕಾರಿಗಳು ಇಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಬಂಡಿಪುರಕ್ಕೆ ಬಿಡಿ ಎನ್ನುತ್ತಿದ್ದು, ಆ ಸ್ಥಳ ದೂರವಿದ್ದರೂ ಅನಿವಾರ್ಯವಾಗಿ ಬಿಟ್ಟು ಬರಬೇಕಾಗುತ್ತಿದೆ. ಇಲ್ಲಿನ ಅರಣ್ಯ ಪ್ರದೇಶವನ್ನು ವನ್ಯಜೀವಿ ವಲಯ ಎಂದು ಗುರುತಿಸಿದರೆ ವಿವಿಧ ಪ್ರಾಣಿ ಪ್ರಭೇದಗಳನ್ನ ರಕ್ಷಿಸಿಸಬಹುದು’ ಎಂದು ತಿಳಿಸಿದರು.

ನಂತರ ಗಂಗಾವತಿ, ಕೊಪ್ಪಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸೇರಿ ತಾಲ್ಲೂಕು ಆಡಳಿತ, ತಾ.ಪಂ ಕಚೇರಿ ಅಧಿಕಾರಿಗಳು ತಮ್ಮ ಇಲಾಖೆಗಳ ಕುರಿತು ಶಾಸಕರಿಗೆ ಪ್ರಗತಿ ವರದಿ ಒಪ್ಪಿಸಿದರು.

ತಹಶೀಲ್ದಾರ್ ಯು.ನಾಗರಾಜ, ಗಂಗಾವತಿ ತಾ.ಪಂ ಇಒ ರಾಮರೆಡ್ಡಿ ಪಾಟೀಲ, ಕೊಪ್ಪಳ ಇಒ ದುಂಡಪ್ಪ ತುರಾದಿ, ನಗರಸಭೆ ಅಧ್ಯಕ್ಷೆ ಹೀರಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಸೇರಿದಂತೆ ಗಂಗಾವತಿ, ಕೊಪ್ಪಳ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

‘ಮಾಧ್ಯಮಗಳ ಮುಂದೆ ಮಾನ ಹರಾಜು ಹಾಕುವೆ’ ‘

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧಿವೇಶನದಲ್ಲಿ ಗಂಗಾವತಿ ತಾಲ್ಲೂಕು ರಾಜ್ಯದ ಡ್ರಗ್ಸ್ ಹಬ್ ಆಗಿದೆ ಎಂದು ಎರಡು ಬಾರಿ ಚರ್ಚೆ ನಡೆಸುವ ಮೂಲಕ ಕ್ಷೇತ್ರದ ಮಾನ ಹರಾಜು ಹಾಕಿದ್ದಾರೆ. ಗಾಂಜಾ ಸೇವನೆ ಮಾರಾಟ ಕ್ಲಬ್ ದಂಧೆಗಳ ವಿಚಾರದಲ್ಲಿ ಅಧಿಕಾರಿಗಳು ಮೌನವಹಿಸಿದರೆ ಎಲ್ಲರನ್ನ ಅಸೆಂಬ್ಲಿ ಮುಂದೆ ನಿಲ್ಲಿಸುತ್ತೇನೆ’ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿ ವಿಠ್ಠಲ್ ಪೀರಗಣ್ಣನವರ್ ಇಲಾಖೆ ಪ್ರಗತಿ ವರದಿ ಓದುತ್ತಿರುವಾಗ ಶಾಸಕರು ಗಂಗಾವತಿ ಸ್ಥಿತಿ ಗಾಂಜಾ ಪ್ರಕರಣಗಳ ದಾಖಲೆ ಕುರಿತು ಮಾಹಿತಿ ಕೇಳಿದಾಗ ಯಾವ ಪ್ರಕರಣಗಳೂ ದಾಖಲಾಗಿಲ್ಲ ಎಂದು ತಿಳಿಸಿದರು. ಈ ವೇಳೆ ನಗರ ಠಾಣೆ ಎಎಸ್ಐ ಶಿವಶರಣಪ್ಪ ಅವರು ಗಾಂಜಾ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಗಂಗಾವತಿಯಲ್ಲಿ 8 ಜನರ ವಿರುದ್ಧ ದಾಖಲಾದ ಗಾಂಜಾ ಪ್ರಕರಣದ ಕುರಿತು ಅಧಿಕಾರಿಗೆ ಪೂರ್ಣ ಮಾಹಿತಿ ಕೇಳಿದರು. ಕೆಲ ಮಾಧ್ಯಮದವರು‘ಕೊಪ್ಪಳ ತಾಲ್ಲೂಕಿನ ಬಸಾಪುರ ಗ್ರಾಮದ ರೆಸಾರ್ಟ್ವೊಂದರಲ್ಲಿ ಥಾಯ್ಲೆಂಡ್ನಿಂದ ಹೈಡ್ರೊ ಗಾಂಜಾ ತಂದು ಮಾರಾಟ ಮಾಡಲಾಗಿದೆ. ಆದರೆ ಸಂಸದ ಕೆ.ರಾಜಶೇಖರ ಹಿಟ್ನಾಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರೆಸಾರ್ಟ್ ಉದ್ಯಮಕ್ಕೆ ಪೆಟ್ಟು ಬೀಳುವುದನ್ನು ತಪ್ಪಿಸಲು ರಾಜಕೀಯ ಪ್ರಭಾವ ಬಳಸಿ ಗಂಗಾವತಿ ತಾಲ್ಲೂಕಿನಲ್ಲಿ ಗಾಂಜಾ ಸಿಕ್ಕಿದೆ ಎನ್ನುವಂತೆ ಪೊಲೀಸರಿಂದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದರು. ಇದರಿಂದ ಕೋಪಗೊಂಡ ಶಾಸಕ‘ಗಂಗಾವತಿಯ ಹೆಸರನ್ನು ರಾಜ್ಯಮಟ್ಟದಲ್ಲಿ ಹಾಳು ಮಾಡಲು ನಿಂತಿದ್ದಾರೆ. ನನ್ನ ಕ್ಷೇತ್ರವನ್ನ ದೂರಿದರೆ ಸಂಸದ ಶಾಸಕ ಎಸ್.ಪಿ ಡಿವೈಎಸ್ಪಿ ಸೇರಿದಂತೆ ಎಲ್ಲ ಅಧಿಕಾರಿಗಳ ಮಾನವನ್ನು ದೆಹಲಿ ಮೀಡಿಯಾದ ಮುಂದೆ ಕುಳಿತು ಹರಾಜು ಮಾಡಿತ್ತೇನೆ. ಅಧಿಕಾರಿಗಳು ಅನೈತಿಕ ಚಟುವಟಿಕೆಗಳನ್ನು ತಡೆಯಬೇಕು’ ಎಂದು ತಾಕೀತು ಮಾಡಿದರು.

‘16 ರಸ್ತೆಗಳ ಅಭಿವೃದ್ಧಿಗೆ ಅನುದಾನ ಬೇಕಿದೆ’

ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಮಾತನಾಡಿ‘ಗಂಗಾವತಿ ನಗರದಲ್ಲಿ 16 ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಆದರೆ ಅನುದಾನದ ಕೊರತೆ ಇದೆ. ಹಿಂದೆ ಕೆಲ ರಸ್ತೆಗಳ ಮರು ನಿರ್ಮಾಣಕ್ಕೆ ಹಣ ಮೀಸಲಿಡಲಾಗಿತ್ತು. ಆದರೆ ಸದಸ್ಯರು ವಾರ್ಡ್ಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಪಟ್ಟು ಹಿಡಿದಾಗ ಎಲ್ಲ ವಾರ್ಡ್ಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು. ಎಲ್ಲ ರಸ್ತೆಗಳ ಮರು ನಿರ್ಮಾಣಕ್ಕೆ ₹5 ಕೋಟಿ ಅನುದಾನ ಒದಗಿಸಿದರೆ ಸೂಕ್ತ ಎಂದು ಶಾಸಕರಿಗೆ ಮನವಿ ಮಾಡಿದರು. ಮನವಿಗೆ ಶಾಸಕರು ಪ್ರತಿಕ್ರಿಯಿಸಿ‘ಪಿಡಬ್ಲ್ಯೂಡಿ ಇಲಾಖೆಯಿಂದ ಗಂಗಾವತಿ ರಸ್ತೆಗಳ ಅಭಿವೃದ್ಧಿಗೆ ₹12.5 ಕೋಟಿ ಅನುದಾನ ಬಿಡುಗಡೆ ಮಾಡಿಸುತ್ತೇನೆ. ಪ್ರಸ್ತಾವ ತಯಾರಿಸಿಟ್ಟುಕೊಳ್ಳಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.