ಕೆರೆ ಪ್ರದೇಶ ಆಕರ್ಷಣೆಯ ತಾಣವಾಗುವುದರಲ್ಲಿ ಸಂದೇಹವಿಲ್ಲ. ಜೀವವೈವಿಧ್ಯ ಸಹಜ ನಿಸರ್ಗ ಸೌಂದರ್ಯ ಉಳಿಸಿ ಸಂರಕ್ಷಿಸುವುದಕ್ಕೆ ನೀರಾವರಿ ಇಲಾಖೆ ಮುಂದಾಗಬೇಕಿದೆ.
-ಶೇಖರಗೌಡ ಮಾಲಿಪಾಟೀಲ, ಸಾಹಿತಿ
ಸಂತಾನ ಅಭಿವೃದ್ಧಿಗಾಗಿ ದೂರದೂರದ ಪಕ್ಷಿಗಳು ಇಲ್ಲಿಗೆ ಬರುತ್ತಿವೆ. ಕೆರೆ ಅಭಿವೃದ್ಧಿಯ ಜೊತೆಗೆ ಸೂಕ್ತ ದಾರಿ ನಿರ್ಮಿಸಿಗೆ ಕೆರೆ ತಟದಲ್ಲಿ ಬೆಂಚ್‌ಗಳನ್ನು ಅಳವಡಿಸಲು ಗ್ರಾಪಂ ಕ್ರಮ ಕೈಗೊಳ್ಳಲಿ.
-ಹನುಮೇಶ ಶೆಟ್ಟರ, ಗ್ರಾಮಸ್ಥ
ಸಹಜ ಸೌಂದರ್ಯದ ಗುಮಗೇರಿ ಕೆರೆ ಶಾಲಾ ಮಕ್ಕಳಿಗೆ ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ. ಮದ್ಯವ್ಯಸನಿಗಳು ಕಿಡಿಗೇಡಿಗಳ ತಾಣವಾಗದಂತೆ ನೋಡಿಕೊಳ್ಳಬೇಕು. ಪರಿಸರ ಪ್ರೀತಿ ಮನಸ್ಸುಳ್ಳವರು ಇಲ್ಲಿಗೆ ಬರುವಂತಾಗಲಿ.