ಸೋಮವಾರ, ಮೇ 23, 2022
30 °C

ಕಸಾಪ ಜನಮುಖಿಯಾಗಿಸುವ ಉದ್ದೇಶ: ಹನುಮಂತಪ್ಪ ಅಂಡಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆ. ಅದನ್ನು ಜನರ ಬಳಿಗೆ ಕೊಂಡೊಯ್ದು ಇನ್ನಷ್ಟು ಜನಮುಖಿಯಾಗಿಸುತ್ತೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಹನುಮಂತಪ್ಪ ಅಂಡಗಿ ಹೇಳಿದರು.

ಸಾಹಿತ್ಯಕ ವಾತಾವರಣದಿಂದ ದೂರಸರಿದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತ್ಯಕ ಚಟುವಟಿಕೆಗಳ ಕೇಂದ್ರವನ್ನಾಗಿಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಬಳಿಗೆ ಕೊಂಡೊಯ್ಯಲು ನನಗೆ ಮತ ನೀಡಬೇಕು. ನುಡಿಯಲ್ಲಿ ನಿಷ್ಠುರತೆ, ಸಜ್ಜನಿಕೆಯ ನಡೆಯಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿರುವ ನನ್ನ ವ್ಯಕ್ತಿತ್ವ ಪರಿಷತ್ತಿನ ಘನತೆಗೆ ತಕ್ಕುದ್ದಾಗಿದೆ. ನನಗೆ ಸರ್ಕಾರ ಸಾಕಷ್ಟು ವೇತನ ನೀಡುತ್ತಿದೆ ಎಂದರು. ಎಸ್.ಎ.ಗಫಾರ, ಎಸ್.ಎಂ.ಕಂಬಾಳಿಮಠ, ನಾಗರಾಜ ಗುರಿಕಾರ ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು