ದಾಂಪತ್ಯ ಬದುಕಿಗೆ ಕಾಲಿಟ್ಟ 43 ಜೋಡಿ
ಕುಷ್ಟಗಿ: ಪಟ್ಟಣದಲ್ಲಿ ಭಗತ್‌ಸಿಂಗ್ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಸರ್ವಧರ್ಮಗಳ ಸಾಮೂಹಿಕ ವಿವಾಹದಲ್ಲಿ ಒಟ್ಟು 43 ಜೋಡಿ ವಧುವರರು ದಾಂಪತ್ಯ ಬದುಕಿಗೆ ಕಾಲಿರಿಸಿದರು. ಬೆಳಿಗ್ಗೆ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಭಿಷೇಕ ನಂತರ ಮಾಂಗಲ್ಯಧಾರಣೆ ಇತರೆ ಕಾರ್ಯಕ್ರಮಗಳು ನಡೆದವು. ನಂತರ ಪ್ರಮುಖ ರಸ್ತೆಗಳಲ್ಲಿ ನವಜೋಡಿಗಳ ಮೆರವಣಿಗೆ ಕಲಾತಂಡಗಳು ಗಮನಸೆಳೆದವು. ಸಂಜೆ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಚಲನಚಿತ್ರ ಕಿರುತೆರೆ ಹಾಗೂ ಸಂಗೀತ ಕ್ಷೇತ್ರದ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಲಾಯಿತು.