ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಟಗಿ: ಎಸ್‌ಡಿಪಿಐ ಸಂಸ್ಥಾಪನಾ ದಿನ ಆಚರಣೆ

Published 22 ಜೂನ್ 2024, 13:56 IST
Last Updated 22 ಜೂನ್ 2024, 13:56 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ ಜೆಪಿ ನಗರದ ಟಿಪ್ಪುಸುಲ್ತಾನ್ ವೃತ್ತದ ಬಳಿ ಸೋಶಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್‌ಡಿಪಿಐ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಜ್ಮೀರ್ ಸಿಂಗನಾಳ, ‘ಎಸ್‌ಡಿಪಿಐ ಇಂದು 16ನೇ ವರ್ಷಕ್ಕೆ ಕಾಲಿಟ್ಟಿದೆ. ರಾಜಕೀಯ ಪಕ್ಷಗಳು ನಮ್ಮನ್ನೆಲ್ಲಾ ಸ್ವಹಿತಾಸಕ್ತಿಗೆ ಬಳಸಿಕೊಂಡಿವೆ, ರಾಜಕೀಯ ಗುಲಾಮಗಿರಿ ಬಿಡಬೇಕು. ಸಾಮಾಜಿಕವಾಗಿ ಮೂಲೆ ಗುಂಪಾದವರನ್ನು ರಕ್ಷಿಸಬೇಕು. ಜನರ ಹಿತವೇ ನಮಗೆ ಮುಖ್ಯ. ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕು. ಎಸ್‌ಡಿಪಿಐ ಪಕ್ಷವನ್ನು ಮೊಳಕೆಯಲ್ಲೆ ಚಿವುಟಿ ಹಾಕುವ ವಿಫಲ ಯತ್ನಗಳು ನಡೆದಿವೆ. ಜನರನ್ನು ಹಸಿವು ಮತ್ತು ಭಯದಿಂದ ಮುಕ್ತಗೊಳಿಸಬೇಕಾದ ಅನಿವಾರ್ಯತೆ ಇದೆ’ ಎಂದರು.

ಜಿಲ್ಲಾ ಸಮಿತಿ ಸದಸ್ಯ ಭಾಷಾ ಸುಳೇಕಲ್, ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ದಾವುದ್, ಕಾರಟಗಿ ನಗರ ಸಮಿತಿ ಅಧ್ಯಕ್ಷ ಇಮ್ರಾನ್, ಕನಕಗಿರಿ ನಗರ ಸಮಿತಿಯ ಕಾರ್ಯದರ್ಶಿ ಕಲಂದರ್, ಡಿಎಸ್‌ಎಸ್ ಗಂಗಾವತಿ ತಾಲ್ಲೂಕು ಉಪಾಧ್ಯಕ್ಷ ಹನುಮಂತಪ್ಪ ಕಟ್ಟಿಮನಿ, ಜಾಮಿಯ ಮಸಜಿದ್ ಸಮಿತಿ ಸದಸ್ಯ ಜಹಾಂಗೀರಸಾಬ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT