ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆಹಾರ ಮಳಿಗೆ ಸ್ಥಾಪಿಸಿ ಲಕ್ಷ ಲಕ್ಷ ಗಳಿಸಿ’

Published 10 ಮಾರ್ಚ್ 2024, 15:36 IST
Last Updated 10 ಮಾರ್ಚ್ 2024, 15:36 IST
ಅಕ್ಷರ ಗಾತ್ರ

ಹುಲಿಗಿ (ಮುನಿರಾಬಾದ್): ಜಾತ್ರೆ ಮತ್ತು ಮೇಳಗಳಲ್ಲಿ ಆಹಾರ ಮಳಿಗೆ ಸ್ಥಾಪಿಸಿ ವ್ಯಾಪಾರ ಮಾಡುವ ಮೂಲಕ ಲಕ್ಷ ರೂಪಾಯಿ ಗಳಿಸಬಹುದು ಎಂದು ಸಂಜೀವಿನಿ ಸಂಘ ಕಿರು ಉದ್ಯಮ ವಿಭಾಗದ ತಾಲ್ಲೂಕು ಕಾರ್ಯಕ್ರಮ ಅಧಿಕಾರಿ ನವೀನ್ ಕುಮಾರ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕೊಪ್ಪಳ, ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ‘ಸಂಜೀವಿನಿ’ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಹಾಗೂ ಶ್ರೀ ಚಿಗುರು ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟ ಹುಲಿಗಿ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಯಲ್ಲಿ ಸಿಗುವ ಸಾಲ ಸೌಲಭ್ಯ ಬಳಸಿಕೊಂಡು ರುಚಿಕಟ್ಟಾದ ಆಹಾರ ಸಾಮಗ್ರಿ ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾವಲಂಬಿಯಾಗಿರಿ. ಈಚೆಗೆ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಆಹಾರ ಮಳಿಗೆಗಳನ್ನು ಸ್ಥಾಪಿಸಿದ ನಮ್ಮ ಜಿಲ್ಲೆಯ ಸಂಘದ ಮಹಿಳೆಯೊಬ್ಬರು ಗಿರ್ಮಿಟ್, ಮಿರ್ಚಿ, ಮಂಡಕ್ಕಿ ಒಗ್ಗರಣೆ ಮಾರಾಟ ಮಾಡಿ ಏಳು ದಿನದ ಜಾತ್ರೆಯ ಕಾರ್ಯಕ್ರಮದಲ್ಲಿ ಸುಮಾರು ₹1.40 ಲಕ್ಷ ಸಂಪಾದಿಸಿದ್ದಾರೆ. ಸಂಘದ ಸದಸ್ಯರಿಗೆ ಈ ಮಹಿಳೆ ಮಾದರಿಯಾಗಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಪಿಡಿಒ ಗುರುದೇವಮ್ಮ, ಕಾರ್ಯದರ್ಶಿ ನಾಗರಾಜ ಹಲಿಗೇರಿ, ಒಕ್ಕೂಟದ ಅಧ್ಯಕ್ಷೆ ನೀಲಮ್ಮ ಹನಸಿ ಮತ್ತು ಪದಾಧಿಕಾರಿಗಳು, ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು. ಮಹಿಬೂಬ್ ಬೀ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT