ಮುನಿರಾಬಾದ್ (ಕೊಪ್ಪಳ ಜಿಲ್ಲೆ): ಮುನಿರಾಬಾದ್ ಜಲಾಶಯದ ಗೇಟ್ ಸಂಖ್ಯೆ 19 ತುಂಡಾಗಿದ್ದು, ಹೊಸ ಗೇಟ್ ತಯಾರಿಕೆಯ ಹೊಣೆಯನ್ನು ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪನಿಗೆ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಲಾಶಯದ ಗೇಟ್‌ನ ಲಿಂಕ್ ಚೈನ್‌ನ ಬಲಭಾಗದ ಕೊಂಡಿ ಕಳಚಿದ್ದು, ಗೇಟ್ ನೂರು ಮೀಟರ್ ದೂರ ಕೊಚ್ಚಿಕೊಂಡು ಹೋಗಿದೆ.
ನೀರಿನ ರಭಸಕ್ಕೆ ಗೇಟ್ ಕೊಚ್ಚಿಕೊಂಡು ಹೋಗಿದ್ದು, ಉಳಿದಂತೆ ಯಾವುದೇ ಸಮಸ್ಯೆ ಆಗಿಲ್ಲ. ಗೇಟ್ ನಿರ್ಮಾಣ ಮಾಡುವ ಹೈದರಾಬಾದ್ ಮೂಲದ ಕಂಪನಿಯಿಂದ ಜಲಾಶಯದ ವಿನ್ಯಾಸ ತರಿಸಿಕೊಂಡು ನಾರಾಯಣ ಎಂಜಿನಿಯರಿಂಗ್ ಅವರಿಗೆ ನೀಡಲಾಗಿದೆ ಎಂದರು.
ಹೊಸ ಗೇಟ್ ಮಾದರಿ 60 ಅಡಿ ಎತ್ತರ ಮತ್ತು 20 ಅಡಿ ಅಗಲ ಇರಲಿದೆ. ತಲಾ 12 ಅಡಿ ಅಗಲದ 5 ಬೃಹತ್ ಕಬ್ಬಿಣದ ಹಲಗೆಗಳನ್ನು ಜೋಡಿಸಿ ಈ ಗೇಟ್ ಸಿದ್ಧಪಡಿಸಲಾಗುತ್ತದೆ.
ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿದೆ. ಪ್ರವಾಸಿಗರಿಗೆ ಅಣೆಕಟ್ಟೆ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.#Tungabhadra #TungabhadraDam #TungabhadraReservoir pic.twitter.com/sfWuDQEaUu
— Prajavani (@prajavani) August 11, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.