ಮಂಡ್ಯ: ಬೆಂಗಳೂರು– ಮೈಸೂರು ಎಕ್ಸ್ಪ್ರೆಸ್ವೇ, ತಾಲ್ಲೂಕಿನ ಯಲಿಯೂರು ಬಳಿ ಶನಿವಾರ ನಸುಕಿನ ವೇಳೆ ನಡೆದ ಅಪಘಾತದಲ್ಲಿ ಯುವ ಚಿತ್ರಕಲಾ ಕಲಾವಿದ, ನಟ ಲೋಕೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಎರಡೂ ಕಾಲು, ಎರಡು ಕೈ ತುಂಡಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಯಾವ ರೀತಿ ಅಪಘಾತವಾಗಿದೆ ಎಂಬುದು ಗೊತ್ತಾಗಿಲ್ಲ. ಬೆಂಗಳೂರಿನಿಂದ ಮೈಸೂರು ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ಅವರು ನಿಂತಿದ್ದ ಕಾರ್ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ಕಾರ್ನ ನಂಬರ್ ಪ್ಲೇಟ್ ಅಪಘಾತ ಸ್ಥಳದಲ್ಲಿ ಪತ್ತೆಯಾಗಿದ್ದು ಕಾರ್ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡತುಪ್ಪೂರು ಗ್ರಾಮದವರಾದ ಲೋಕೇಶ್ ಚಲನಚಿತ್ರಗಳ ಕಲಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು. ಹಲವು ಕಲಾ ನಿರ್ದೇಶಕರ ಬಳಿ ಕೆಲಸ ಮಾಡಿದ್ದರು. ನಟನಾಗಿಯೂ ಹಲವು ಚಿತ್ರ, ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು. ಅಮೂಲ್ಯ ರತ್ನ ಕಿರುಚಿತ್ರ, ಫ್ಯಾಮಿಲಿ ಪ್ಯಾಕ್ ಚಲನಚಿತ್ರದಲ್ಲಿ ಅವರು ಅಭಿನಯಿಸಿದ್ದರು.

ಶುಕ್ರವಾರ ತಡರಾತ್ರಿ 2.30ಕ್ಕೆ ಬೆಂಗಳೂರು ಬಿಟ್ಟಿದ್ದ ಅವರು ತಮ್ಮ ಊರಿಗೆ ತೆರಳುತ್ತಿದ್ದರು. ನಸುಕಿನ 5.15 ಸಮಯದಲ್ಲಿ ಅಪಘಾತವಾಗಿದೆ. ಹೊಸ ಬೈಕ್ ಖರೀದಿಸಿದ್ದ ಅವರು ಶುಕ್ರವಾರ ಸಂಜೆ 7.22ರಲ್ಲಿ ರೀಲ್ಸ್ ಮಾಡಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.