ಮಳವಳ್ಳಿ: ತಾಲ್ಲೂಕಿನಲ್ಲಿ ‘ದೇವಿ’ ಎಂದರೆ ‘ನೊಂದವರ ಪರವಾದ ಧ್ವನಿ’ ಎಂದೇ ಅರ್ಥ.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಅವರದ್ದು ಮಹಿಳೆಯರ ಪರ ದಣಿವರಿಯದ ನಿರಂತರ ಹೋರಾಟ. ಸಮಸ್ಯೆ ಪರಿಹಾರವಾಗುವವರೆಗೂ ಅವರು ಎಲ್ಲಿಯೂ ನಿಲ್ಲರು. ಸಂಘಟನೆಯಲ್ಲಿ, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಸ್ಥಾನದವರೆಗೂ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ತಾಲ್ಲೂಕಿನ ನೆಲಮಾಕನಹಳ್ಳಿಯ ದೇವಿ, ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿದ್ದಾಗಲೇ ಎಸ್ಎಫ್ಐ ಜೊತೆ ಸೇರಿ ಹೋರಾಟಕ್ಕೆ ಇಳಿದಿದ್ದವರು. ಬಸ್ ಸೌಕರ್ಯಕ್ಕಾಗಿ ಆರಂಭವಾದ ಹೋರಾಟ ನೊಂದ ಮಹಿಳೆಯರ, ರೈತರ ಪರವಾದ ಹೋರಾಟದವರೆಗೂ ಹಬ್ಬಿದೆ. ಮೂರು ದಶಕದಲ್ಲಿ ಅವರಿಂದ ನೆರವು, ಸಾಂತ್ವನ ಪಡೆದವರು ಅಸಂಖ್ಯ.

ಎರಡು ಬಾರಿ ನೆಲಮಾಕನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯರಾಗಿ, ಅವರು ಉದ್ಯೋಗ ಖಾತ್ರಿ ಯೋಜನೆ ಮೂಲಕ ಪುನಶ್ಚೇತನಗೊಳಿಸಿದ ಕೆರೆ–ಕಟ್ಟೆಗಳಿಗೆ ಜನ ‘ದೇವಿ ಕಟ್ಟೆ’ ಎಂದೇ ಹೆಸರಿಟ್ಟಿದ್ದಾರೆ. ಇದು ಅವರ ಬದ್ಧತೆಯ ದ್ಯೋತಕ. ತಾಲ್ಲೂಕಿನ 45 ಕೆರೆಗಳನ್ನು ನರೇಗಾ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಹೋರಾಟದ ಮೂಲಕವೇ ಸುಮಾರು 7ಸಾವಿರ ಮಹಿಳೆಯರನ್ನು ಒಗ್ಗೂಡಿಸಿದ್ದಾರೆ. ತಾಲ್ಲೂಕಿನಲ್ಲಿ ಸ್ವ– ಸಹಾಯ ಸಂಘಗಳ ಮಹಿಳೆಯರಿಗೆ ಮಾರ್ಗದರ್ಶನ ನೀಡಲೆಂದೇ ‘ಪ್ರೇರಣ ಮಹಿಳಾ ಒಕ್ಕೂಟ’ವನ್ನು ರಚಿಸಿದ್ದಾರೆ.

ಪಡಿತರ ಚೀಟಿ, ಮೂಲಸೌಕರ್ಯ, ನಿವೇಶನ ಮತ್ತು ವಸತಿ ಸಮಸ್ಯೆ ಹಾಗೂ ದೆಹಲಿಯಲ್ಲಿನ ರೈತ ವಿರೋಧಿ ಕಾಯ್ದೆಗಳ ವಿರುದ್ಧದ ಐತಿಹಾಸಿಕ ಹೋರಾಟದಲ್ಲಿ ಭಾಗಿಯಾಗಿ ಸಂಯುಕ್ತ ಕಿಸಾನ್ ಮೋರ್ಚಾದ ರಾಜ್ಯ ಮಟ್ಟದ ಸಮಿತಿಯಲ್ಲಿ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸಿದ ಶ್ರೇಯ ಅವರದ್ದು.

ಜನಪರ ಹೋರಾಟಗಳ ಕಾರಣಕ್ಕೆ ವಿವಿಧೆಡೆ ಅವರ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೂ ಅವರದ್ದುಅನ್ಯಾಯದ ವಿರುದ್ಧ ತಗ್ಗದ ದನಿ. ಪತಿ, ರೈತ ಹೋರಾಟಗಾರ ಎನ್.ಎಲ್. ಭರತ್ ರಾಜ್ ಅವರ ಸಾಂಗತ್ಯವು ಅವರ ಹೋರಾಟದ ಕೆಚ್ಚನ್ನು ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.