ಮದ್ದೂರು (ಮಂಡ್ಯ ಜಿಲ್ಲೆ): ‘ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಿದ ಮುಲ್ಲಾಗಳು ಯಾರೇ ಆಗಲಿ ಅವರ ವಿರುದ್ಧ ಕೂಡಲೇ ಕ್ರಮವಾಗಬೇಕು ಹಾಗೂ ಮಸೀದಿಗಳನ್ನು ಮುಚ್ಚಿಸಬೇಕು’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ‘ಚುನಾವಣೆ ಸಂದರ್ಭದಲ್ಲಿ ಕದಲೂರು ಉದಯ್ (ಮದ್ದೂರು ಶಾಸಕ) ಅವರಿಂದ ದುಡ್ಡು ಪಡೆದು ಮತ ಮಾರಿಕೊಂಡಿದ್ದೀರಿ, ಜೂಜು ಆಡಿಸುವವರನ್ನು ಗೆಲ್ಲಿಸಿದ್ದೀರಿ. ಅದಕ್ಕೆ ಈ ಪರಿಸ್ಥಿತಿ ಬಂದಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದೆ. ಡಿ.ಜೆ.ಹಳ್ಳಿ– ಕೆ.ಜಿ.ಹಳ್ಳಿ ಘಟನೆಯಲ್ಲಿ ಹಲವಾರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ. ಪೊಲೀಸರ ಬಂದೋಬಸ್ತ್ ಇದ್ದರೂ ಮದ್ದೂರಿನಲ್ಲಿ ಈ ರೀತಿಯ ದುರ್ಘಟನೆ ನಡೆದಿರುವುದು ವಿಪರ್ಯಾಸ’ ಎಂದರು.

‘ಬಂಧಿಸಲಾಗಿರುವ ಹಿಂದುತ್ವ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಗಣೇಶ ವಿಸರ್ಜನೆ ವೇಳೆ ಇದ್ದ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಿಪಿಐ ಅರೆಹುಚ್ಚ:

ಮಾಜಿ ಶಾಸಕ ಡಿ.ಸಿ, ತಮ್ಮಣ್ಣ ಮಾತನಾಡಿ, ‘ನಾನು ಶಾಸಕನಾಗಿದ್ದ ವೇಳೆ ಹಿಂದೆ ಎಂದೂ ಈ ರೀತಿಯ ಘಟನೆಯಾಗಿರಲಿಲ್ಲ. ಈ ಘಟನೆಗೆ ಪೊಲೀಸರೇ ಕಾರಣ. ಮದ್ದೂರಿನಲ್ಲಿರುವ ಸಿಪಿಐ ಒಬ್ಬ ಅರೆಹುಚ್ಚ. ಮದ್ದೂರಿನ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು’ ಎಂದು ಆಗ್ರಹಿಸಿದರು.

.ಮಂಡ್ಯ | ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ: 8 ಮಂದಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.