ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡವಪುರ | ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಮರ

Published 9 ಮೇ 2024, 13:47 IST
Last Updated 9 ಮೇ 2024, 13:47 IST
ಅಕ್ಷರ ಗಾತ್ರ

ಪಾಂಡವಪುರ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸುಮಾರು 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ತೆಂಗು ಹಾಗೂ ಇತರೆ ಮರಗಳು ಹಾಗೂ ಉರುಳಿಬಿದ್ದಿವೆ.

ತಾಲ್ಲೂಕಿನ ಚಿನಕುರಳಿ, ಬನ್ನಂಗಾಡಿ, ಕಟ್ಟೇರಿ, ಬೆಳ್ಳಾಳೆ, ಕನಗೋನಹಳ್ಳಿ, ಗೌರಿಕಟ್ಟೆ ಸರ್ಕಲ್, ಬಳಘಟ್ಟ, ಎಂ.ಆರ್.ಕೊಪ್ಪಲು, ಮೇಲುಕೋಟೆ, ಕ್ಯಾತನಹಳ್ಳಿ, ರಾಗಿಮುದ್ದನಹಳ್ಳಿ, ಅರಳಕುಪ್ಪೆ, ಹರವು, ಅಲ್ಪಹಳ್ಳಿ, ಅಂತನಹಳ್ಳಿ, ಟಿ.ಎಸ್.ಛತ್ರ ಗ್ರಾಮ ಸೇರಿ ಹಲವೆಡೆಗಳಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಕೆಲವೆಡೆ ರಸ್ತೆ ಮಧ್ಯಭಾಗಕ್ಕೆ ಮರಗಳು ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಅಪಾಯದಿಂದ ಪಾರು: ತಾಲ್ಲೂಕಿನ ದೇವೇಗೌಡನಕೊಪ್ಪಲು ಗ್ರಾಮದಲ್ಲಿ ಬಿರುಗಾಳಿಗೆ ಪುಟ್ಟಣ್ಣ ಅವರ ಹೆಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಹೆಂಚು ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ಪುಟ್ಟಣ್ಣನವರ ಕುಟುಂಬ ಎಚ್ಚೆತ್ತುಕೊಂಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT