ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Srirangapatna Dasara: ಕೆಮ್ಮಣ್ಣು ಮಟ್ಟಿಯ ಮೇಲೆ ಜಟ್ಟಿಗಳ ಕಾದಾಟ

Published 17 ಅಕ್ಟೋಬರ್ 2023, 14:30 IST
Last Updated 17 ಅಕ್ಟೋಬರ್ 2023, 14:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ದಸರಾ ಉತ್ಸವದ ನಿಮಿತ್ತ ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜು ಹಿಂಭಾಗದ ತಾಲ್ಲೂಕು ಕ್ರೀಡಾಂಗಣದಲ್ಲಿ ಸಿದ್ದಪಡಿಸಿದ್ದ ಅಖಾಡದಲ್ಲಿ ಮಂಗಳವಾರ ಏರ್ಪಡಿಸಿದ್ದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳು ಕೆಮ್ಮಣ್ಣು ಮಟ್ಟಿಯ ಮೇಲೆ ಕಾದಾಟ ನಡೆಸಿದರು.

ತಾಲ್ಲೂಕಿನ ಹೊಂಗಹಳ್ಳಿಯ ಪೈ. ನಿಶ್ಚಿತ್‌ ಮತ್ತು ಮೈಸೂರಿನ ಪೈ. ಸಯ್ಯದ್‌ ಯಾಸೀನ್‌ ಅವರ ನಡುವೆ ನಡೆದ ಕುಸ್ತಿ ರೋಚಕವಾಗಿತ್ತು. ಬೆಳಗಾವಿಯ ಪೈ.ಮುಬಾರಕ್‌ ಮತ್ತು ಮಹದೇವಪುರದ ಪೈ.ವಿಕಾಸ್‌ ಅವರ ನಡುವೆ ಮಾರ್ಫಿಟ್‌ ಕುಸ್ತಿ ನಡೆಯಿತು. ಗಂಜಾಂನ ಮಂಜು ಕೆಂಚ ಮತ್ತು ಬೆಂಗಳೂರಿನ ಸೋಫಿಯಾನ್‌ 20 ನಿಮಿಷಗಳ ಕಾಲ ಕಾದಾಡಿದರು.

ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರದ ಕುಸ್ತಿಪಟುಗಳೂ ಈ ಟೂರ್ನಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬೆಂಗಳೂರಿನ ಶ್ರೇಯಾ ಮತ್ತು ಬನ್ನೂರಿನ ಕಿರಣ ಅವರ ನಡುವೆ ನಡೆದ ಮಹಿಳಾ ಕುಸ್ತಿ ಕುಸ್ತಿಪ್ರಿಯರ ಗಮನ ಸೆಳೆಯಿತು. ಒಟ್ಟು 50 ಜತೆ ಕುಸ್ತಿಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು.

ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಹೊಂಗಹಳ್ಳಿಯ ಪೈ.ನಿಶ್ಚಿತ್‌ ಮತ್ತು ಮೈಸೂರಿನ ಸಯ್ಯದ್‌ ಯಾಸೀನ್‌ ಕೆಮ್ಮಣ್ಣು ಮಟ್ಟಿಯ ಮೇಲೆ ಗೆಲುವಿಗಾಗಿ ಕಾದಾಟ ನಡೆಸಿದರು
ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಹೊಂಗಹಳ್ಳಿಯ ಪೈ.ನಿಶ್ಚಿತ್‌ ಮತ್ತು ಮೈಸೂರಿನ ಸಯ್ಯದ್‌ ಯಾಸೀನ್‌ ಕೆಮ್ಮಣ್ಣು ಮಟ್ಟಿಯ ಮೇಲೆ ಗೆಲುವಿಗಾಗಿ ಕಾದಾಟ ನಡೆಸಿದರು

ಶಾಸಕ ರಮೇಶ ಬಂಡಿಸಿದ್ದೇಗೌಡ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಮುಂದಿನ ದಸರಾ ಉತ್ಸವದಲ್ಲಿ ಇನ್ನೂ ಅದ್ದೂರಿಯಾಗಿ ಕುಸ್ತಿ ಪಂದ್ಯ ಏರ್ಪಡಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕುಮಾರ್‌, ಎಸ್ಪಿ ಎನ್‌. ಯತೀಶ್‌, ಜಿ.ಪಂ. ಸಿಇಒ ಶೇಕ್‌ ತನ್ವೀರ್‌ ಆಸಿಫ್‌ ಇತರ ಪ್ರಮುಖರು ಜಟ್ಟಿಗಳ ಕಾದಾಟವನ್ನು ವೀಕ್ಷಿಸಿದರು. ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ನೂರಾರು ಕುಸ್ತಿ ಪ್ರೇಮಿಗಳು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT