ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚಾಮುಂಡಿ ಸನ್ನಿಧಾನದಲ್ಲಿ ಚಂಡಿಕಾ ಹೋಮ

Last Updated 25 ಅಕ್ಟೋಬರ್ 2020, 11:18 IST
ಅಕ್ಷರ ಗಾತ್ರ

ಮೈಸೂರು: ನವರಾತ್ರಿಯ ಒಂಬತ್ತನೇ ದಿನದಂದು ಮಹಾನವಮಿ ಅಂಗವಾಗಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಭಾನುವಾರ ಚಂಡಿಕಾ ಹೋಮ ನೆರವೇರಿತು.

ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಹೋಮ ನಡೆಯಿತು. ಆಯುಧ ಪೂಜೆ ನಿಮಿತ್ತ ಬೆಟ್ಟಕ್ಕೆ ಭೇಟಿ ನೀಡಿದ್ದ ಭಕ್ತರು ದೇವಿ ದರ್ಶನ ಪಡೆದರು.

ಮಹಾನವಮಿಯಂದು ಚಾಮುಂಡೇಶ್ವರಿಗೆ ಮಹಾಲಕ್ಷ್ಮೀಯ ಅಲಂಕಾರ ಮಾಡಲಾಗಿದೆ. ಕಮಲ ವಾಹಿನಿ ಚಾಮುಂಡೇಶ್ವರಿಯ ಕಣ್ತುಂಬಿಕೊಳ್ಳಲು ಭಕ್ತರು ಮುಗಿಬಿದ್ದರು.

ವಿಜಯದಶಮಿಯಂದು ಚಾಮುಂಡೇಶ್ವರಿ ಅಶ್ವಾರೂಢಳಾಗಿ ಕಂಗೊಳಿಸಲಿದ್ದಾಳೆ ಎಂದು ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ್ ದೀಕ್ಷಿತ್ ಪ್ರಜಾವಾಣಿಗೆ ತಿಳಿಸಿದರು.

ನವರಾತ್ರಿಯ ಒಂಬತ್ತು ದಿನವೂ ದೇಗುಲದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ಲೋಕಕಲ್ಯಾಣರ್ಥವಾಗಿ ಪ್ರಾರ್ಥನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT