ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸ್ವತಃ ತಮ್ಮ ಕಾರಿನ ಟೈರ್ ಬದಲಾಯಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಿಲ್ಲಾಧಿಕಾರಿ ಪ್ರಯಾಣಿಸುತ್ತಿದ್ದ ಎಸ್ಯುವಿಯ ಹಿಂಭಾಗದ ಟೈರ್ ಪಂಕ್ಚರ್ ಆಗಿದ್ದು, ಅದನ್ನು ಬದಲಾಯಿಸಲು ತಾವೇ ಜಾಕ್ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಅಲ್ಲಿದ್ದ ಸಾರ್ವಜನಿಕರೊಬ್ಬರು ಅವರನ್ನು ಗುರುತಿಸಿದ್ದು, ‘ಮೇಡಂ, ನೀವು ರೋಹಿಣಿ ಸಿಂಧೂರಿ ತಾನೇ, ನೀವು ಪಂಕ್ಚರ್ ಹಾಕ್ತಾ ಇದೀರಾ ಮೇಡಂ’ ಎಂದು ಕೇಳಿದ್ದಾರೆ.

ಈ ವೇಳೆ ರೋಹಿಣಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ನಗು ಬೀರುತ್ತಾ ತಮ್ಮ ಕೆಲಸ ಮುಂದುವರಿಸಿರುವುದು ವಿಡಿಯೊದಲ್ಲಿದೆ.

ಕಳೆದ ವಾರ ಕುಟುಂಬ ಸದಸ್ಯರ ಜತೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.