ಗುರುವಾರ , ಮೇ 28, 2020
27 °C

ಗಂಧದ ಮರ ಕಳ್ಳನನ್ನು ಹಿಡಿದ ಭದ್ರತಾ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗಂಧದ ಮರ ಕಳವು ಮಾಡಲು ಯತ್ನಿಸುತ್ತಿದ್ದ ಕುಮಾರ ಎಂಬ ವ್ಯಕ್ತಿಯನ್ನು ವಿ.ವಿ.ಯ ಭದ್ರತಾ ಸಿಬ್ಬಂದಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶುಕ್ರವಾರ ಬೆಳಗಿನ ಜಾವ ವಿಶ್ವವಿದ್ಯಾಲಯ ಲಲಿತಕಲಾ ಕಾಲೇಜಿನ ಉತ್ತರ ಭಾಗದ ಮರದ ತೋಪಿನಲ್ಲಿ ಮರ ಬಿದ್ದ ಶಬ್ದ ಕೇಳಿಬಂದಿದೆ. ಇದರಿಂದ ಎಚ್ಚೆತ್ತ ಭದ್ರತಾ ಉಸ್ತುವಾರಿ ಅರುಣ್‌ಕುಮಾರ್, ಭದ್ರತಾ ಸಿಬ್ಬಂದಿ ವೆಂಕೇಗೌಡ ಮತ್ತು ಮಹದೇವ ಅವರು ಮರ ಬಿದ್ದ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಆರೋಪಿಯು ಗಿಡಗಳ ಮರೆಯಲ್ಲಿ ಕುಳಿತಿದ್ದು, ಸಿಬ್ಬಂದಿಯನ್ನು ನೋಡಿ ಓಡಲು ಯತ್ನಿಸಿದ್ದಾನೆ.

ಸಿಬ್ಬಂದಿಯು ವ್ಯಕ್ತಿಯನ್ನು ಹಿಡಿದು, ಆತನು ತಂದಿದ್ದ ಸಲಕರಣೆಗಳು, ಕಡಿದಿದ್ದ 2 ಗಂಧದ ತುಂಡುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂಬಂಧ ಸರಸ್ವತಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು