ಬುಧವಾರ, ಜನವರಿ 19, 2022
17 °C

ಮೈಸೂರು: ಸಿದ್ದರಾಮನಹುಂಡಿಯಲ್ಲಿ ಅಂಗಡಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಸಗಟು ದಿನಸಿ ಅಂಗಡಿ ವಿನಾಯಕ ಟ್ರೇಡರ್ಸ್ ಗೆ ಭಾನುವಾರ ನಸುಕಿನಲ್ಲಿ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಹಾಗೂ ಇತರೆ ಪದಾರ್ಥಗಳು ಸುಟ್ಟು ಹೋಗಿವೆ.

ಸ್ಥಳಕ್ಕೆ ಅಗ್ನಿಶಾಮಕ ಪಡೆ ಬಂದು ಬೆಂಕಿ ನಂದಿಸಿ, ಅಕ್ಕಪಕ್ಕದಲ್ಲಿದ್ದ ಗೊಬ್ಬರದ ಅಂಗಡಿಗಳಿಗೆ ಬೆಂಕಿ ಹರಡುವುದನ್ನು ತಡೆಯಿತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿರಬಹುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಅಂಗಡಿಯಲ್ಲಿ ಸುಮಾರು₹ 20 ಲಕ್ಷ ಮೌಲ್ಯದ  ಪದಾರ್ಥಗಳಿದ್ದು, ಈಗ ಎಲ್ಲವೂ ಭಸ್ಮವಾಗಿವೆ ಎಂದು ಅಂಗಡಿ ಮಾಲೀಕ ಉದಯ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು