ಜೇನುಕುರುಬ ಸಮುದಾಯದ ಮಕ್ಕಳಿಗೆ ಅಯ್ಯನಕೆರೆ ಹಾಡಿಯಲ್ಲಿ ವಸತಿ ಶಾಲೆ ಮತ್ತು ಈ ಸಮುದಾಯದವರಿಗೆ 9 ಹಾಡಿಗಳಲ್ಲಿ ಬಹು ಉದ್ದೇಶಿತ ಕೇಂದ್ರಗಳು ನಿರ್ಮಾಣವಾಗುತ್ತಿದ್ದು ಗಿರಿಜನರ ಅಭಿವೃದ್ಧಿಗೆ ಪೂರಕವಾಗಲಿವೆ
ಗಂಗಾಧರ್ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಶಿವಣ್ಣ ಅಯ್ಯನಕೆರೆ ಹಾಡಿ ಜೇನುಕುರುಬ ಸಮುದಾಯದ ಮುಖಂಡ
ಕೊಡಗಿನ ಕಾಫಿ ತೋಟಕ್ಕೆ ಕೂಲಿಗೆ ಹೋಗುವ ಗಿರಿಜನರು ತಮ್ಮ ಮಕ್ಕಳೊಂದಿಗೆ ಹೋಗುವ ಅಭ್ಯಾಸವಿದೆ. ಕೇಂದ್ರ ಸರ್ಕಾರ ವಸತಿ ಶಾಲೆ ಆರಂಭಿಸುತ್ತಿರುವುದು ಜೇನುಕುರುಬ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿದೆ
ಶಿವಣ್ಣ ಅಯ್ಯನಕೆರೆ ಹಾಡಿ ಜೇನುಕುರುಬ ಸಮುದಾಯದ ಮುಖಂಡ
ಪಿ.ಎಂ. ಜನಮನ ಯೋಜನೆ ಲಾಭ
ಅಯ್ಯನಕೆರೆ ಹಾಡಿಯಲ್ಲಿ ನಿರ್ಮಾಣವಾಗುತ್ತಿರುವ ಪಿ.ಎಂ. ಜನಮನ ಶಿಕ್ಷಣ ವ್ಯವಸ್ಥೆಯ ಲಾಭ ಹನಗೋಡು ಹೋಬಳಿಯ ಬಲ್ಲೇನಹೊಸಹಳ್ಳಿ ಹಾಡಿ ಚಂದನಗಿರಿ ಹಾಡಿ ಅಯ್ಯನಕೆರೆ ಹಾಡಿ ಹೆಬ್ಬಳ್ಳ ಹಾಡಿ ಮಾಸ್ತಮನ ಹಾಡಿ ಭೀರತಮ್ಮನಹಾಡಿಗೆಯಲ್ಲಿ ಒಟ್ಟು 575 ಗಿರಿಜನ ಕುಟುಂಬಗಳು ಬದುಕು ಕಟ್ಟಿಕೊಂಡಿದ್ದು ಈ ಹಾಡಿಯಲ್ಲಿ ಶಾಲೆಗೆ ಹೋಗುವ ವಯಸ್ಸಿನ 221 ಮಕ್ಕಳಿಗೆ ಯೋಜನೆ ಲಾಭ ಸಿಗಲಿದೆ.