‘ಕ್ಷಮೆ ಕೇಳುವುದು ಕಮಲ್‌ಗೆ ಬಿಟ್ಟಿದ್ದು’-ಶಿವರಾಜ್ ಕುಮಾರ್
ಬೆಂಗಳೂರು: ‘ಕಮಲ್ ಹಾಸನ್ ಹಿರಿಯ ನಟ. ಅವರಿಗೆ ಏನು ಮಾತನಾಡ ಬೇಕೆಂದು ನಾವು ಹೇಳಲು ಸಾಧ್ಯವಿಲ್ಲ. ಕ್ಷಮೆ ಕೇಳುವುದು ಅವರಿಗೆ ಬಿಟ್ಟಿದ್ದು. ಕಾರ್ಯಕ್ರಮದಲ್ಲಿ ನಾನು ಇದ್ದೆ ಎಂಬ ಕಾರಣಕ್ಕೆ ವಿಡಿಯೊ ಎಡಿಟ್ ಮಾಡಿ ನನ್ನನ್ನು ವಿವಾದದಲ್ಲಿ ಎಳೆದು ತರುತ್ತಿದ್ದಾರೆ. ಕನ್ನಡವೇ ನನ್ನ ಮೊದಲ ಆದ್ಯತೆ’ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.