ಎಚ್.ಡಿ.ಕೋಟೆ: ವಿದ್ಯಾರ್ಥಿಗಳು ಸಾಧನೆ ಮಾಡಲು ಓದಿನ ಹಸಿವು ಇರಬೇಕು. ನಿರಂತರ ಪರಿಶ್ರಮದಿಂದ ಸಾಧನೆ ಮಾಡಬೇಕು ಎಂದು ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜು ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೇಷಾಚಲ ಹೇಳಿದರು.

ಪಟ್ಟಣದ ಎಸ್.ವಿ.ಜಿ.ಸೆಂಟರ್ ಆಫ್ ಎಕ್ಸ್ಲೆನ್ಸ್ ಮತ್ತು ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಬಿ.ಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಕಲಾ-ವಾಣಿಜ್ಯ ಕ್ಲಬ್ಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಓದಿಗೆ ನಗರ, ಗ್ರಾಮೀಣ ಎಂಬ ಬೇಧವಿಲ್ಲ, ಪಟ್ಟಣದಲ್ಲಿಯೂ ಓದಿಗೆ ಪೂರಕ ವಾತಾವರಣ ಹಾಗೂ ಸೌಲಭ್ಯಗಳಿವೆ. ಸಾಧನೆ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಹಸಿವು ಇರಬೇಕು. ಒಳ್ಳೆಯ ಅವಕಾಶ ಬಳಸಿಕೊಂಡು ಸಾಧನೆ ಮಾಡಬೇಕು ಎಂದರು.

ಮೊಬೈಲ್ ಫೋನ್ ನಿಮಗೆ ಗ್ರಂಥಾಲಯ ಇದ್ದಂತೆ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ. ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಯಾವುದೇ ವಿಷಯದಲ್ಲಾದರೂ ಏಕಾಗ್ರತೆ ಅಧ್ಯಯನ ಬಹಳ ಮುಖ್ಯ ಎಂದರು.

ಕನ್ನಡಿಗರನ್ನು ಎದೆ ತಟ್ಟಿ ನಿಲ್ಲಿಸಿದ್ದು ಇಮ್ಮಡಿ ಪುಲಕೇಶಿ. ಮೈಸೂರು ಪ್ರಾಂತ್ಯದಲ್ಲಿ ಮಂತ್ರಿಮಂಡಲ ಆಡಳಿತ ಸುಧಾರಣೆ ತಂದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗ್ರಾಮ ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಬಗ್ಗೆ ಗೌರವ ಇಟ್ಟಿಕೊಳ್ಳಬೇಕು. ನಿಮ್ಮ ಹುಟ್ಟೂರಿನ ಬಗ್ಗೆ ಒಂದು ಭಾವನಾತ್ಮಕ ಲೇಖನ ಬರೆದ ವಿದ್ಯಾರ್ಥಿಗಳಿಗೆ ₹2 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು.

ಸಂಸ್ಥೆಯ ಕಾರ್ಯದರ್ಶಿ ಶೃತಿ ಮಾತನಾಡಿ, ಕಲೆ ಹಾಗೂ ವಾಣಿಜ್ಯ ಎರಡು ಬಲಿಷ್ಠವಾದ ವಿಷಯಗಳು ಅವುಗಳನ್ನು ಭೇದಭಾವ ಮಾಡಬಾರದು. ವಿದ್ಯಾರ್ಥಿಗಳ ಬೆಳವಣಿಗೆ ಎಲ್ಲ ವಿಷಯದಲ್ಲೂ ಮುಂದೆ ಇದೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ‘ಇಮ್ಮಡಿ ಪುಲಕೇಶಿ ಕ್ಲಬ್’ನಲ್ಲಿ ಇರುತ್ತೀರಿ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಲಬ್’ನಲ್ಲಿ ಇರುತ್ತೀರಿ, ಇವೆರಡರಲ್ಲಿಯೂ ಸದಸ್ಯತ್ವ ಪಡೆದುಕೊಂಡಿರುತ್ತೀರಿ. ವಿದ್ಯಾರ್ಥಿಗಳಿಗೆ ಓದುವುದರ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಾಗೆ ತಯಾರಿ ಮಾಡಿ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಪ್ರಥಮ ಸ್ಥಾನದಲ್ಲಿ ಬರುವಂತೆ ಮಾಡುತ್ತೇವೆ ಎಂದರು.

ಪುರಸಭೆ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಆಡಳಿತಾಧಿಕಾರಿ ಜಯದೇವರಾಜ ಅರಸು, ಪ್ರಾಂಶುಪಾಲ ಎಸ್.ಡಿ. ಕುಮಾರ್ ಸ್ವಾಮಿ, ನಿವೃತ್ತ ಪ್ರಾಧ್ಯಾಪಕಿ ಡಾ.ಶ್ರೀಮತಿ, ಜೀವಿಕ ಬಸವರಾಜು, ಎಂ.ಎಲ್. ರವಿಕುಮಾರ್, ಕಂದಸ್ವಾಮಿ, ಶಿವರಾಜ್, ಕಾಳರಾಜು, ವಾಸು, ರಮೇಶ್, ಗೀತಾ, ಪುಷ್ಪವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.