ಭತ್ತ: ನಂಜನಗೂಡು ತಾಲ್ಲೂಕಿನ ಹರತಲೆಯ ಎಚ್.ಬಿ. ಲೋಕೇಶ್, ತಾಯೂರಿನ ಚಿನ್ನಬುದ್ದಿ ಪಿ.
ಬಾಳೆ: ಯಳಂದೂರು ತಾಲ್ಲೂಕಿನ ಮಲಾರಪಾಳ್ಯದ ಚಿನ್ನಬುದ್ದಿ, ಕೊಮಾರನಪುರದ ಎಂ.ಪ್ರದೀಪ್.
ಕಬ್ಬು: ಕೊಳ್ಳೇಗಾಲ ತಾಲ್ಲೂಕಿನ ಮುಡಗುಂಡದ ಎಂ. ಪ್ರದೀಪ್, ಹೊಸ ಮಾಲಂಗಿಯ ರಾಚಪ್ಪ ಜಿ.
ಟೊಮೆಟೊ: ಚಾಮರಾಜನಗರ ತಾಲ್ಲೂಕಿನ ಗೋವಿಂದವಾಡಿಯ ಮಹದೇವಸ್ವಾಮಿ, ಹೊನ್ನೇಗೌಡರಹುಂಡಿಯ ಎಚ್.ಎಸ್.ಮಹದೇವಸ್ವಾಮಿ.
ಮೆಕ್ಕೆಜೋಳ: ಹನೂರು ತಾಲ್ಲೂಕಿನ ಚಿಂಚಹಳ್ಳಿಯ ಪುಟ್ಟಮಾದಪ್ಪ, ಬಂಡಹಳ್ಳಿಯ ವಿ.ಕೃಷ್ಣಶೆಟ್ಟಿ.
ಪೋಲ್ ಬೀನ್ಸ್: ಗುಂಡ್ಲುಪೇಟೆ ತಾಲ್ಲೂಕಿನ ಪುತ್ತನಪುರದ ಶೇಖರ, ಕೆಬ್ಬೆಪುರದ ಕುಮಾರ ಕೆ.ಬಿ.
ರೈತ ಮಹಿಳೆಯರು: ಚಾಮರಾಜನಗರದ ‘ಮಾದಾಪುರ ಕೆಂದಾವರೆ ಪದ್ಮಭೂಷಣ ಮಹದೇವಪ್ಪ ಸೇವಾ ಟ್ರಸ್ಟ್’ನಿಂದ ನೀಡುವ 2024ನೇ ಸಾಲಿನ ಪ್ರಶಸ್ತಿ: ಭತ್ತದ ಬೆಳೆ ವಿಭಾಗದಲ್ಲಿ ಹುಣಸೂರು ತಾಲ್ಲೂಕಿನ ಬೀರನಹಳ್ಳಿಕಾವಲಿನ ಲಲಿತಮ್ಮ, ನಂಜನಗೂಡು ತಾಲ್ಲೂಕಿನ ಅಳಗಂಚಿಯ ಚಿನ್ನಮ್ಮ, ರೇಷ್ಮೆ ಬೆಳೆ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚುಂಚನಹಳ್ಳಿಯ ದೇವಿರಮ್ಮ ಮತ್ತು ಚಾಮರಾಜನಗರ ತಾಲ್ಲೂಕಿನ ಕಾಳಿನಹುಂಡಿಯ ಸುಮನಾ, ಬಾಳೆ ಬೆಳೆ ವಿಭಾಗದಲ್ಲಿ ಚಾಮರಾಜನಗರದ ವರ್ಷಾ ಅವರಿಗೆ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರದಾನ ಮಾಡಿದರು.