ಮಂತ್ರಾಲಯ (ರಾಯಚೂರು): ‘ಧಾರ್ಮಿಕ ದತ್ತಿ ಇಲಾಖೆಯು ಮಂತ್ರಾಲಯ, ಶ್ರೀಶೈಲ, ತಿರುಪತಿಯಲ್ಲಿ ನಿರ್ಮಿಸಿರುವ ವಸತಿಗೃಹಗಳ ಜಾಗದ ವಿವಾದ ಇತ್ಯರ್ಥಪಡಿಸಲು ಆಂಧ್ರಪ್ರದೇಶದ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು, ಮಂತ್ರಾಲಯದ ಕರ್ನಾಟಕ ಛತ್ರದಲ್ಲಿ ಇಲಾಖೆಯಿಂದ ನಿರ್ಮಿಸಿರುವ ನೂತನ ಹಾಗೂ ಹಳೆ ಕಟ್ಟಡಗಳ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಹಿಂದೆ ಸರಿಯಾಗಿ ಪತ್ರವ್ಯವಹಾರ ಮಾಡದೇ ಮೌಖಿಕ ಒಪ್ಪಿಗೆ ಆಧಾರದಲ್ಲಿ ಕಲ್ಯಾಣ ಮಂಟಪ, ಛತ್ರ, ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಇದರಿಂದ ಕಟ್ಟಡದ ದುರಸ್ತಿಗೆ ತೊಡಕಾಗಿದೆ’ ಎಂದು ತಿಳಿಸಿದರು.

‘ಮಂತ್ರಾಲಯ, ಶ್ರೀಶೈಲಂ ಹಾಗೂ ತಿರುಪತಿ ಸೇರಿದಂತೆ ವಿವಧೆಡೆ ವಿವಾದದಿಂದ ಕೂಡಿರುವ ಜಾಗದ ಸಮಸ್ಯೆಯನ್ನು ಬೇಗನೆ ಇತ್ಯರ್ಥಪಡಿಸಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಆಯಾ ದತ್ತಿ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.