ಹುಮನಾಬಾದ್: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಅಳವಡಿಸುವ ಬ್ಯಾನರ್ಗಳಿಗೆ ಕಡ್ಡಾಯವಾಗಿ ಪುರಸಭೆಯಿಂದ ಪರವಾನಗಿ ಪಡೆಯಬೇಕು ಎಂದು ಪಿಎಸ್ಐ ಸುರೇಶ ತಿಳಿಸಿದರು.

ಜಾತ್ರೆ ಅಂಗವಾಗಿ ಪಟ್ಟಣದ ಪುರಸಭೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಬ್ಯಾನರ್ಗಳಿಗೆ ಕೆಲ ಕಿಡಿಗೇಡಿಗಳು ಹಾನಿ ಮಾಡಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಪುರಸಭೆ ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಯಾರ ಹೆಸರಲ್ಲಿ ಪರವಾನಗಿ ಪಡೆಯಲಾಗಿದೆ, ಬ್ಯಾನರ್ ಅಳತೆ, ಪ್ರಿಂಟರ್ಸ್ ಹೆಸರು ಹಾಗೂ ಎಷ್ಟು ದಿನಕ್ಕೆ ಪುರಸಭೆ ಪರವಾನಗಿ ಪಡೆದಿದೆ ಎಂಬ ಪತ್ರವನ್ನು ಬ್ಯಾನರ್ನಲ್ಲಿ ಪ್ರದರ್ಶಿಸಬೇಕು’ ಎಂದು ತಿಳಿಸಿದರು.

ಸದಸ್ಯರಾದ ವೀರೇಶ ಸೀಗಿ, ರಮೇಶ ಕಲ್ಲೂರ, ಅನೀಲ ಪಲ್ಲರಿ, ಎಸ್.ಎ.ಬಾಸಿದ್ ಸೇರಿದಂತೆ ಇತರೆ ಸದಸ್ಯರು ಮಾತನಾಡಿ, ‘ಪಟ್ಟಣದಲ್ಲಿ ಸ್ವಚ್ಛತೆ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು.ಪ್ರತಿನಿತ್ಯ ದೇವರ ಪಲ್ಲಕ್ಕಿ ಸಾಗುವ ರಸ್ತೆಯಲ್ಲಿ ಯಾವುದೇ ಸಮಸ್ಯೆ ಕಂಡುಬರದಂತೆ ಆಗಬೇಕು’ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕ್ರಮ್ ಜಾ, ಮುಖ್ಯಾಧಿಕಾರಿ ಫೀರೋಜ್ ಖಾನ್ ಸೇರಿದಂತೆ ಪುರಸಭೆ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.