ಭಾನುವಾರ, ಅಕ್ಟೋಬರ್ 20, 2019
28 °C

ಅಸಮರ್ಥತೆ ಒಪ್ಪಿಕೊಂಡವರನ್ನು ಬಲಶಾಲಿ ಎನ್ನುವುದಿಲ್ಲ: ಸಿದ್ದರಾಮಯ್ಯ

Published:
Updated:

ರಾಯಚೂರು: ‘ತಂತಿ ಮೇಲೆ ನಡೆಯುವ ಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ  ಹೇಳಿಕೊಂಡಿದ್ದಾರೆ. ಇಂಥವರನ್ನು ಬಲಶಾಲಿ ಎಂದು ಕರೆಯುವುದಕ್ಕೆ ಸಾಧ್ಯವೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದ ಗಂಜ್‌ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ವ್ಯಾಪಾರಿಗಳೊಂದಿಗೆ ಸಂವಾದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ತಂತಿ ಮೇಲೆ ನಡೆಯುವುದು ಕಷ್ಟವಾಗುತ್ತದೆ, ಕೆಳಗೆ ಇಳಿಯಿರಿ ಎಂದು ನಾನು ಹೇಳಿದ್ದೇನೆ. ಕೇಂದ್ರದಿಂದ ನೆರೆ ಪರಿಹಾರ ತರಲು ಸಾಧ್ಯವಾಗದ ಇಂಥ ಮುಖ್ಯಮಂತ್ರಿಯನ್ನು ಸ್ಟ್ರಾಂಗ್‌ ಎಂದು ಕರೆಯಲು ಸಾಧ್ಯವೆ’ ಎಂದು ಮತ್ತೆ ಕಿಚಾಯಿಸಿದರು.

ಇನ್ನಷ್ಟು...

 ಯಡಿಯೂರಪ್ಪ ಸ್ಥಿತಿ ನೋಡಿದರೆ ಅಯ್ಯೋ ಪಾಪ ಅನ್ಸುತ್ತೆ: ಸಿದ್ದರಾಮಯ್ಯ 

'ಆಡಳಿತ ಕಷ್ಟವಾದರೆ ರಾಜೀನಾಮೆ ಕೊಡಿ'- ಸಿದ್ದರಾಮಯ್ಯ ಒತ್ತಾಯ

Post Comments (+)