ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕರ ಮೇಲೆ ಹಲ್ಲೆ: ಕ್ರಮಕ್ಕಾಗಿ ಪ್ರತಿಭಟನೆ

Last Updated 3 ಜನವರಿ 2020, 13:56 IST
ಅಕ್ಷರ ಗಾತ್ರ

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರಾಣೇಶ ಕುಲಕರ್ಣಿ ಅವರ ಮೇಲೆ ಗುರುವಾರ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಳದೊಡ್ಡಿ ಗ್ರಾಮದ ಬಿಸಿಎ 6ನೇ ಸೆಮಿಸ್ಟರ್‌ ವಿದ್ಯಾರ್ಥಿ ರಂಜಿತಕುಮಾರ್‌ಗೌಡ ಹಾಗೂ ಸಂಗಡಿಗರು ಸೇರಿ ಗುರುವಾರ ಹಲ್ಲೆ ಮಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪ್ರಾಧ್ಯಾಪಕರನ್ನು ಕೂಡಲೇ ಸಮೀಪದ ಬಸವ ಆಸ್ಪತ್ರೆಗೆ ದಾಖಲಿಸಲಾಯಿತುಎಂದು ಮನವಿಯಲ್ಲಿ ವಿವರಿಸಲಾಗಿದೆ.

ಬಿ.ಎ. ವಿದ್ಯಾರ್ಥಿ ಆಂಜೀನೇಯ್ಯ ಮತ್ತು ರಂಜಿತ್‌ ಮಧ್ಯ ಗಲಾಟೆ ನಡೆದಿರುವ ವಿಚಾರವಾಗಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಪ್ರಾಣೇಶ ಅವರು ಇಬ್ಬರಿಗೂ ಕಾಲೇಜಿನಲ್ಲಿ ಬುದ್ಧಿವಾದ ಹೇಳಿದ್ದರು. ಆ ಸಂದರ್ಭದಲ್ಲಿಯೆ ವಿದ್ಯಾರ್ಥಿಗಳು ಆವೇಷದಿಂದ ಮಾತನಾಡಿದಾಗ, ಎಲ್ಲ ಪ್ರಾಧ್ಯಾಪಕರು ತಿಳಿವಳಿಕೆ ನೀಡಿದ್ದರು. ಆದರೆ, ಮಧ್ಯಾಹ್ನ ಪ್ರಾಣೇಶ ಅವರು ಬೈಕ್‌ ಮೂಲಕ ಸಂಚರಿಸುವಾಗ ಗುಂಪು ಹಲ್ಲೆ ನಡೆಸಿಲಾಗಿದೆ ಎಂದು ತಿಳಿದುಬಂದಿದೆ.

ದೂರು ದಾಖಲು

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಪ್ರಾಧ್ಯಾಪಕರು ಪಶ್ಚಿಮ ಠಾಣೆಗೆ ರಂಜಿತ್‌ ಸೇರಿದಂತೆ ಆರು ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT