ಲಿಂಗಸುಗೂರು: ಪಟ್ಟಣದ ಗುರುಗುಂಟಾ ರಸ್ತೆ ಬಳಿ ಮನೆಯೊಂದರ ಬೀಗ ಮುರಿದು ಚಿನ್ನ, ಹಣ ಕಳ್ಳತನವಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಪಟ್ಟಣದ ವಿದ್ಯಾಚೇತನ ಪಿಯು ಕಾಲೇಜಿನ ಪ್ರಾಚಾರ್ಯ ವೆಂಕಟೇಶ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಾಲೇಜಿನಲ್ಲಿ ಸಂಗ್ರಹವಾಗಿದ್ದ ಪ್ರವೇಶಾತಿ ಶುಲ್ಕದ ₹2 ಲಕ್ಷ ಹಾಗೂ ತಮ್ಮ ಸ್ವಂತ ಹಣ ಸೇರಿ ಒಟ್ಟು ₹2.50 ಲಕ್ಷ ಮತ್ತು ಅಲ್ಮೇರಾದಲ್ಲಿಟ್ಟಿದ್ದ 40 ಗ್ರಾಂ ಚಿನ್ನದ ಆಭರಣ ಕಳ್ಳತನವಾಗಿದೆ.

ವೆಂಕಟೇಶ ಅವರು ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮರಳಿ ಕಾಲೇಜಿಗೆ ಹಾಗೂ ಅವರ ಪತ್ನಿ ಕೂಡ ಖಾಸಗಿ ಶಿಕ್ಷಕಿಯಾಗಿದ್ದರಿಂದ ಅವರು ಮನೆಗೆ ಬೀಗ ಹಾಕಿಕೊಂಡು ಶಾಲೆಗೆ ಹೋಗಿದ್ದ ಸಮಯದಲ್ಲಿ ಕಳ್ಳರು ಮನೆಯ ಬೀಗ ಮುರಿದು ಹಣ ಹಾಗೂ ಆಭರಣ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪಿಐ ಪುಂಡಲಿಕ ಪಟತಾರ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆತಂಕ: ಮೊಹರಂ ಸಂದರ್ಭದಲ್ಲಿ ಕರಡಕಲ್, ಈಚನಾಳ ತಾಂಡಾ, ಚಿತ್ತಾಪುರ ಗ್ರಾಮಗಳಲ್ಲಿ ಸರಣಿ ಕಳ್ಳತನ ಘಟನೆ ನಡೆದು ಎರಡು ದಿನ ಕಳೆದಿಲ್ಲ. ಈಗ ಹಾಡಹಗಲೇ ಕಳ್ಳತನ ನಡೆದಿರುವುದು ಪಟ್ಟಣದ ಜನತೆ ಆತಂಕಕ್ಕೊಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.