ರಾಮನಗರ: ‘ ಸಚಿವ ಅಶ್ವತ್ಥನಾರಾಯಣ ಕರ್ನಾಟಕ ಕಂಡಂತಹ ಅತ್ಯಂತ ಭ್ರಷ್ಟ ರಾಜಕಾರಣಿಗಳಲ್ಲಿ ಒಬ್ಬರು. ಆದರೂ ನಾನು ಬ್ರಾಹ್ಮಣನ ಥರ ಇದ್ದೇನೆ, ಶುದ್ಧ ರಾಜಕಾರಣಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.

ಕನಕಪುರದಲ್ಲಿ ಬುಧವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ ರಾಜ್ಯಕ್ಕೆ ಅಮಿತ್ ಶಾ ಬಂದರು ಎಂಬ ಕಾರಣಕ್ಕೆ ನಾವು ಅವರನ್ನು ಟಾರ್ಗೆಟ್ ಮಾಡಿಲ್ಲ. ಸತ್ಯ ಜನರ ಮುಂದೆ ಇಟ್ಟಿದ್ದೇವೆ. ನಮ್ಮ ವಿರುದ್ಧ ಏನು ಬೇಕಾದರೂ ತನಿಖೆ ಮಾಡಲಿ. ಅದನ್ನೆಲ್ಲ ಎದುರಿಸಲು ಸಿದ್ಧರಿದ್ದೇವೆ’ ಎಂದರು.

ಓದಿ...ಮೋದಿ ಮಾಧ್ಯಮಗಳ ಮೈಕ್ ಕಂಡರೆ ಎಕೆ–47 ಗನ್ ಕಂಡಂತೆ ಹೆದರುತ್ತಾರೆ: ಕಾಂಗ್ರೆಸ್

ಬಿಜೆಪಿ ಮಂತ್ರಿಗಳಿಂದಲೇ ಅಶ್ವತ್ಥನಾರಾಯಣ ವಿರುದ್ಧ ಷಡ್ಯಂತ್ರ ನಡದಿದೆ ಎಂಬ ಕುಮಾರಸ್ವಾಮಿ ಆರೋಪಗಳ ಕುರಿತು ಪ್ರತಿಕ್ರಿಯಿಸಿ ‘ ಪಕ್ಕದ ಮನೆಯಲ್ಲಿ ಇದ್ದವರೇ ಕಲ್ಲು ಹೊಡೆಯುವುದು ಸಹಜ. ಬಹುತೇಕ ಸಂದರ್ಭದಲ್ಲಿ ಹತ್ತಿರ ಇದ್ದವರೇ ಮಾಹಿತಿ ನೀಡುತ್ತಾರೆ. ಹೀಗಾಗಿ ಈ ಆರೋಪ ನಿಜ ಇದ್ದರೂ ಇರಬಹುದು’ ಎಂದರು.

‘ಪಿಎಸ್ಐ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ವ್ಯಕ್ತಿಯೊಬ್ಬರಿಗೆ ಪೊಲೀಸರು ವಿಚಾರಣೆಗೆ ನೋಟಿಸ್ ನೀಡಿದ್ದರು. ಆದರೆ ಸಚಿವರ ಸಂಬಂಧಿ ಹೇಳಿದ ನಂತರ ವಿಚಾರಣೆ ಮಾಡದೇ ಕಳುಹಿಸಿದ್ದಾರೆ. ಇದರ ಅರ್ಥ ಏನು?’ ಎಂದು ಶಿವಕುಮಾರ್ ಪ್ರಶ್ನಿಸಿದರು.

‘ ರಾಮನಗರ ಜಿಲ್ಲೆಯ ಮೂರ್ನಾಲ್ಕು ಮಂದಿಯೂ ಪೊಲೀಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿ ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಅಂಗಡಿ ತೆರೆದಾಗ ಗ್ರಾಹಕರು ಬರುವುದು ಸಹಜ. ಸರ್ಕಾರ ಭ್ರಷ್ಟಾಚಾರಕ್ಕೆ ಮುಂದಾಗಿದ್ದರಿಂದಲೇ ಕೆಲವರು ನೌಕರಿ ಆಸೆಗೆ ಸಾಲ–ಸೋಲ ಮಾಡಿ ಹಣ ಕೊಟ್ಟು ಈಗ ಸಿಕ್ಕಿಹಾಕಿಕೊಂಡಿದ್ದಾರೆ’ ಎಂದರು.

ಎಸಿಬಿ ತನಿಖೆ ನಡೆಸಿ: ಕೆಪಿಎಸ್ಸಿ ಅಧ್ಯಕ್ಷ, ಸದಸ್ಯರೂ ಹಣ ಕೊಟ್ಟು ಈ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಆದರೂ ಮುಖ್ಯಮಂತ್ರಿಗಳು ಎಸಿಬಿಯಿಂದ ಇದರ ವಿಚಾರಣೆ ಯಾಕೆ ನಡೆಸಿಲ್ಲ’ ಎಂದು ಪ್ರಶ್ನಿಸಿದ ಡಿಕೆಶಿ, ‘ ಕೆಪಿಎಸ್ಸಿ ಒಂದು ಸ್ವಾಯತ್ಥ ಸಂಸ್ಥೆ. ಇಂತಹ ಸಂಸ್ಥೆ ವಿರುದ್ಧ ಗಂಭೀರ ಆರೋಪ ಬಂದಿದೆ. ಅಧ್ಯಕ್ಷರು ಪ್ರಾಮಾಣಿಕರಾಗಿದ್ದರೆ ತಾವೇ ಎಸಿಬಿಯಲ್ಲಿ ದೂರು ದಾಖಲಿಸಿ ತನಿಖೆ ಎದುರಿಸಬೇಕು. ಸಿದ್ದರಾಮಯ್ಯನವರ ಕಾಲದಲ್ಲಿ ಆಗಿದ್ದರೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ ರಾಮನಗರದಲ್ಲಿ ಯಾರಪ್ಪ ಗಂಡಸು ಎಂದು ನಮ್ಮನ್ನೆಲ್ಲ ಕೇಳಿದ್ದರು. ನಾವೆಲ್ಲ ಹೆಂಗಸರ ಕುಲಕ್ಕೆ ಸೇರಿದವರು. ಸೀರೆ ಕೊಡಿಸಿದರೆ ಉಟ್ಟುಕೊಂಡು ಸುಮ್ಮನಿರುತ್ತೇವೆ. ಬೇಕಿದ್ದರೆ ಬಂದು ಗಂಡಸುತನದ ಪರೀಕ್ಷೆ ನಡೆಸಲಿ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ..ಅಶ್ವತ್ಥನಾರಾಯಣ ವಿರುದ್ಧ ಬಿಜೆಪಿ ಮಂತ್ರಿಗಳಿಂದಲೇ ಷಡ್ಯಂತ್ರ; ಕುಮಾರಸ್ವಾಮಿ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.