ಸೋಮವಾರ, ಆಗಸ್ಟ್ 8, 2022
21 °C

ಬಿಡದಿ: ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಕೋವಿಡ್ ಲಾಕ್‌ಡೌನ್‌ ಪರಿಣಾಮ ಸುಮಾರು 40 ದಿನಗಳಿಂದ ಸ್ತಬ್ಧವಾಗಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮ ಸೋಮವಾರದಿಂದ ಬಸ್ ಸಂಚಾರ ಆರಂಭಿಸಿದೆ.

ಬಿಡದಿಯಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭಿಸಿದ್ದು, ಬಸ್‌ನಲ್ಲಿ ಪ್ರಯಾಣಿಸಲು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

ಪ್ರಯಾಣಿಕ ಸತೀಶ್ ಮಾತನಾಡಿ, ‘ನಾನು ಬೆಂಗಳೂರಿಗೆ ಹೋಗಲು ಬಸ್ ಅವಲಂಬಿಸಿದ್ದೇನೆ. ಈಗ ಸರ್ಕಾರ ಅನ್‌ಲಾಕ್ ಘೋಷಿಸಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ನಮಗೆ ಕೆಲಸಕ್ಕೆ ಹೋಗಿಬರಲು ಸಹಕಾರಿಯಾಗಿದೆ. ಕೋವಿಡ್ ನಿಯಮಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಪ್ರಯಾಣ ಮಾಡಬೇಕು’ ಎಂದರು.

‘ಬಸ್‌ನಲ್ಲಿ 50 ಸೀಟ್‌ಗಳು ಲಭ್ಯವಿವೆ. ಒಂದು ಬಸ್‌ನಲ್ಲಿ 25 ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬಿಡದಿ ನಿಲ್ದಾಣದಿಂದ 120 ಮಾರ್ಗಗಳಿದ್ದು, ಪ್ರಸ್ತುತ 80 ಮಾರ್ಗದಲ್ಲಿ ಬಸ್‌ ಸಂಚಾರ ಆರಂಭಿಸಲಾಗಿದೆ’ ಎಂದು ಬಿಡದಿ ಬಸ್‌ನಿಲ್ದಾಣದ ಸಂಚಾರ ನಿಯಂತ್ರಣಾಧಿಕಾರಿ ನಾಗಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು