ಗುರುವಾರ , ಫೆಬ್ರವರಿ 25, 2021
28 °C

ಫೆ. 22ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಬೆಂಗಳೂರಿನ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯಿಂದ 22ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಫೆ. 22ರಂದು ಬೆಳಿಗ್ಗೆ 9ರಿಂದ 9.35ರ ವರೆಗೆ ನಡೆಯಲಿದೆ ಎಂದು ವ್ಯವಸ್ಥಾಪಕ ಕೆ.ಎಚ್. ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ವಧು– ವರರಿಗೆ ಉಚಿತವಾಗಿ ಮಾಂಗಲ್ಯ, ಕಾಲುಂಗುರ, ಬಟ್ಟೆ ನೀಡಲಾಗುವುದು ಎಂದು ತಿಳಿಸಿದರು.

ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಫೆ. 14ರ ಒಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080–26712988 ಅಥವಾ ಮೊಬೈಲ್ 70190 73889 ಸಂಪರ್ಕಿಸಿ ನೊಂದಾಯಿಸಿ ಕೊಳ್ಳಬೇಕು ಎಂದು
ಹೇಳಿದರು.

ವರನಿಗೆ 21 ವರ್ಷ ಮತ್ತು ವಧುವಿಗೆ 18 ವರ್ಷ ತುಂಬಿರಬೇಕು. ಗುರುತಿನ ಚೀಟಿ, ವೈದ್ಯಾಧಿಕಾರಿಯ ಪ್ರಮಾಣ ಪತ್ರ ಲಗ್ತತಿಸಬೇಕು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಚ್.ಎಂ. ಕೃಷ್ಣಮೂರ್ತಿ, ಎಸ್.ಕೆ. ನಟರಾಜು, ಜೆ.ಆರ್. ದಾಮೋದರ ನಾಯ್ಡು, ಎಚ್.ಕೆ. ಮುತ್ತಪ್ಪ, ಎಂ.ಕೆ. ಹರೀಶ್ ಬಾಬು, ನಾರಾಯಣಸ್ವಾಮಿ, ರಾಘವೇಂದ್ರ ನೇಕಾರ, ಮಾರಪ್ಪ ದೊಂಬಿದಾಸ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು