ಮಂಚನಬೆಲೆ ಜಲಾಶಯ ಕ್ರೆಸ್ಟ್ ಗೇಟ್‌ ಗೋಡೆ ಶಿಥಿಲ: ಪರಿಶೀಲನೆ

ಮಂಗಳವಾರ, ಏಪ್ರಿಲ್ 23, 2019
31 °C

ಮಂಚನಬೆಲೆ ಜಲಾಶಯ ಕ್ರೆಸ್ಟ್ ಗೇಟ್‌ ಗೋಡೆ ಶಿಥಿಲ: ಪರಿಶೀಲನೆ

Published:
Updated:
Prajavani

ಮಾಗಡಿ: ಮಂಚನಬೆಲೆ ಜಲಾಶಯದ ಕ್ರೆಸ್ಟ್‌ಗೇಟ್‌ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು ಶಿಥಿಲಗೊಂಡಿದೆ. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ಕೂಡಲೇ ದುರಸ್ತಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಒತ್ತಾಯಿಸಿದರು.

ಮಂಚನಬೆಲೆ ನಿವಾಸಿಗಳ ಮನವಿ ಮೇರೆಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ತಿಪ್ಪಗೊಂಡನಹಳ್ಳಿ ಜಲಾಶಯ ದುರಸ್ತಿಗೊಳಿಸುವ ಸಲುವಾಗಿ ಇಲ್ಲಿನ ನೀರನ್ನು ಮಂಚನಬೆಲೆ ಜಲಾಶಯಕ್ಕೆ ತುಂಬಿಸಲಾಗಿದೆ. 86ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೆಚ್ಚುವರಿಯಾಗಿ ಎರಡು ಟ್ರಸ್ಟ್‌ ಗೇಟ್‌ಗಳ ಮೂಲಕ ನೀರು ಹೊರಗೆ ಹರಿಸಲಾಗುತ್ತಿದೆ. ಇದುವರೆಗೂ ಜಲಾಶಯ ದುರಸ್ತಿಗೊಳಿಸಿಲ್ಲ. ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡು ನೀರು ಜಿನುಗುತ್ತಿದೆ. ಈಗಲೇ ಎಚ್ಚೆತ್ತುಕೊಂಡು ದುರಸ್ತಿಗೊಳಿಸಬೇಕು. ಮಂಚನೆಬೆಲೆ ಜಲಾಶಯದ ನೀರು ಕಲುಷಿತಗೊಂಡಿದೆ. ಇದೇ ನೀರನ್ನು ಕುಡಿಯಲು ಸರಬರಾಜು ಮಾಡಲಾಗುತ್ತಿದೆ ಎಂದರು.

ಶುದ್ಧೀಕರಣ: ಮಂಚನಬೆಲೆ ಜಲಾಶಯಕ್ಕೆ ಹೊಸ ಮೋಟಾರು ಅಳವಡಿಸಲಾಗಿದೆ. ನೀರು ಶುದ್ಧೀಕರಿಸಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನಟರಾಜ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !