ಸೋಮವಾರ, ಜುಲೈ 26, 2021
23 °C
ಗಣತಿದಾರರಿಗೆ ಅಗತ್ಯ ತರಬೇತಿ: ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳ ನೇಮಕ

ಜನಗಣತಿಗೆ ಜಿಲ್ಲಾಡಳಿತ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಜನಗಣತಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದಕ್ಕಾಗಿ ಈಗಾಗಲೇ ತರಬೇತುದಾರರ ಪಟ್ಟಿ ಸಿದ್ಧಗೊಳಿಸಲಾಗುತ್ತಿದೆ.

ಈ ವರ್ಷ ಜನಗಣತಿ ಪ್ರಕ್ರಿಯೆ ಅಂಕಿ-ಅಂಶಗಳು ಸಂಪೂರ್ಣ ಆನ್‌ಲೈನ್‌ ಮೂಲಕ ಸಿದ್ಧಗೊಳ್ಳಲಿರುವುದು ವಿಶೇಷ. 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 10.8ಲಕ್ಷ ಜನಸಂಖ್ಯೆ ಇತ್ತು. ದಶಕದಲ್ಲಿ ಜಿಲ್ಲೆಯ ಜನಸಂಖ್ಯೆ 2-3 ಲಕ್ಷದಷ್ಟು ಏರಿಕೆ ಆಗಿರಬಹುದು ಎಂದು ಅಂದಾಜಿಸಲಾಗಿದೆ. 2019ರ ನವೆಂಬರ್‌ನಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಇಬ್ಬರು ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಲಾಗಿದ್ದು, ಅವರು ಉಳಿದವರಿಗೆ ತರಬೇತಿ ನೀಡಲಿದ್ದಾರೆ.

ಜನಗಣತಿಗೆ ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿದೆ. ಗ್ರಾಮಾಂತರ ಹಾಗೂ ನಗರ ಪ್ರದೇಶಗಳಿಗೆ ಪ್ರತ್ಯೇಕ ಬ್ಲಾಕ್ ಹಾಗೂ ಚಾರ್ಜ್‌ಗಳನ್ನು ವಿಂಗಡಿಸಲಾಗಿದೆ. ರಾಮನಗರ ಗ್ರಾಮಾಂತರದಲ್ಲಿ 455 ಬ್ಲಾಕ್‌, ಚನ್ನಪಟ್ಟಣದಲ್ಲಿ 467, ಮಾಗಡಿಯಲ್ಲಿ 802 ಹಾಗೂ ಕನಕಪುರದಲ್ಲಿ 953 ಬ್ಲಾಕ್ ಗಳನ್ನಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ತಲಾ ಎರಡು ಚಾರ್ಜ್‌ಗಳನ್ನು ನೀಡಲಾಗಿದೆ.

ಗ್ರಾಮಾಂತರ ಪ್ರದೇಶಗಳೊಂದಿಗೆ ರಾಮನಗರ ಪಟ್ಟಣಕ್ಕೆ ಚಾರ್ಜ್‌ 1ರಲ್ಲಿ 81 ಬ್ಲಾಕ್, ಚಾರ್ಜ್‌ 2ರಲ್ಲಿ 86 ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗಿದೆ. ಚನ್ನಪಟ್ಟಣದ ನಗರದ ಚಾರ್ಜ್‌ 1ರಲ್ಲಿ 64 ಹಾಗೂ ಚಾರ್ಜ್‌ 2ರಲ್ಲಿ 64 ಬ್ಲಾಕ್ ಗಳನ್ನು ಸಿದ್ಧಪಡಿಸಲಾಗಿದೆ. ಕನಕಪುರ ನಗರಕ್ಕೆಗೆ 96, ಮಾಗಡಿ ಪುರಸಭೆಗೆ 49 ಹಾಗೂ ಬಿಡದಿ ಪುರಸಭೆಗೆ 58 ಬ್ಲಾಕ್‌ಗಳನ್ನು ರಚಿಸಲಾಗಿದೆ.

ಗ್ರಾಮಾಂತರ ಪ್ರದೇಶಕ್ಕೆ ಆಯಾ ತಹಶೀಲ್ದಾರ್ ಹಾಗೂ ಪಟ್ಟಣಕ್ಕೆ ಚಾರ್ಜ್‌ಗಳನ್ನು ಜನಗಣತಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಗೆ ಒಟ್ಟು 2002 ಗಣತಿದಾರರು, 335 ಮೇಲ್ವಿಚಾರಕರು, 34 ಕ್ಷೇತ್ರ ತರಬೇತುದಾರರನ್ನು ನಿಯೋಜಿಸಲಾಗಿದೆ.

ಮಾಸ್ಟರ್ ತರಬೇತುದಾರರ ಮೂಲಕ ಮಾರ್ಚ್‌10ರಿಂದ 14ರವರೆಗೂ ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡಿದ್ದು, ಚಾರ್ಜ್ ಅಧಿಕಾರಿಗಳಿಗೆ ಫೆಬ್ರುವರಿ 27ಹಾಗೂ 28ರಂದು ತರಬೇತಿ ನೀಡಲಾಗಿದೆ. ಇವರ ಎಲ್ಲ ಮಾಹಿತಿ ಸಿಎಂಎಂಎಸ್‌ನಲ್ಲಿ ಸೇರಿಸಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಬಳಕೆದಾರರ ಸಂಖ್ಯೆ ಹಾಗೂ ಪಾರ್ಸ್‌ವರ್ಡ್‌ ನೀಡಲಾಗಿದೆ.

ನೇಮಕ: ಗ್ರಾಮಾಂತರ ವಿಭಾಗಕ್ಕೆ ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದರೆ, ನಗರಸಭೆ ಹಾಗೂ ಪುರಸಭೆಗೆ ಜಾರ್ಜ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಯನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಈಗಾಗಲೇ ನಕಾಶೆ ಸಿದ್ಧಪಡಿಸಲಾಗಿದ್ದು, ಮನೆಗಳ ಪತ್ತೆ ಕಾರ್ಯಕ್ಕೆ ಹೊಸ ಬ್ಲಾಕ್‌ಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು