ರಸ್ತೆ ಜಕ್ಕಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ನಮಗಿರುವ ಅಲ್ಪ ಸ್ವಲ್ಪ ಭೂಮಿಯಲ್ಲಿ ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆದಿದ್ದೇವೆ ರಾತ್ರಿ ವೇಳೆ ಜಮೀನುಗಳಿಗೆ ನುಗ್ಗುವ ಹಂದಿಯ ಹಿಂಡು ಬೆಳೆಗಳನ್ನು ನಾಶಪಡಿಸುತ್ತಿವೆ. ಅಲ್ಲದೆ ನೆಲವನ್ನು ಸಹ ಅಗೆಯುತ್ತಿವೆ. ಅರಣ್ಯಾಧಿಕಾರಿಗಳಿಗಂತೂ ಈ ಬಗ್ಗೆ ಗಮನವಿಲ್ಲ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಅದು ಬರುವಷ್ಟರಲ್ಲಿ ಹತ್ತಾರು ಬಾರಿ ಕಚೇರಿಗಳಿಗೆ ಎಡತಾಗಬೇಕು. ನಮ್ಮ ಕಷ್ಟ ಕೇಳುವವರಾರು? ಕೂಡಲೇ ಸಂಬಂಧಪಟ್ಟವರುಗಮನಹರಿಸಬೇಕು.
ಜಗ್ಗಯ್ಯ, ರೈತ, ರಸ್ತೆ ಜಕ್ಕಸಂದ್ರ
ಈ ಬಗ್ಗೆ ಗಮನಹರಿಸಲಾಗುವುದು. ರೈತರು ನಷ್ಟ ಅನುಭವಿಸಿದರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೆ ಪ್ರಾಮಾಣಿಕವಾಗಿ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಲಾಗುವುದು. ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುವುದು.