ಶಿವಮೊಗ್ಗ: ಜಿಲ್ಲೆಯ ಜಾನುವಾರುಗಳಿಗೆ ಹಸಿರು ಮೇವು ಪೂರೈಕೆ ಮಾಡುವುದು ರೈತರಿಗೆ ಸವಾಲಾಗಿದೆ. ಹಾಲು ಉತ್ಪಾದನೆ ಉದ್ದೇಶಕ್ಕೆ ಸಾಕಾಣಿಕೆ ಮಾಡಿರುವ ಎಚ್ಎಫ್, ಜರ್ಸಿ, ಮಲೆನಾಡು ಗಿಡ್ಡ ಸೇರಿದಂತೆ ಇತರೆ ತಳಿಯ ಹಸುಗಳಿಗೆ ಹಸಿರು ಮೇವು ತರಲು ಕಿಲೋಮೀಟರ್ಗಳಷ್ಟು ದೂರ ಹೋಗಬೇಕು. ಇದರಿಂದ, ಜಾನುವಾರುಗಳ ನಿರ್ವಹಣೆ ಅನ್ನದಾತನಿಗೆ ಕಷ್ಟಕರವಾಗಿದೆ.

ರೈತರು ಕೃಷಿಯೊಂದಿಗೆ ಪಶುಸಂಗೋಪನೆಗೂ ಹೆಚ್ಚು ಒತ್ತು ನೀಡಿದ್ದು, ಮೇವು ಬೆಳೆಯಲು ಸಾಕಾಗುವಷ್ಟು ಅಗತ್ಯ ಭೂಮಿ ಕೆಲವು ರೈತರಿಗೆ ಇಲ್ಲ. ಇದರಿಂದ, ಹೈನುಗಾರಿಕೆಯನ್ನೇ ನಂಬಿಕೊಂಡ ರೈತರು ಮೇವು ತರಲು ಬೆಳಿಗ್ಗೆಯಿಂದ ಸಂಜೆಯವರೆಗೆ ಹರಸಾಹಸ ಪಡುತ್ತಿದ್ದಾರೆ. ಇದರಿಂದ, ಕೃಷಿ ಚಟುವಟಿಕೆಯಕೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ.

ರೈತರು ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆ ಸೇರಿದಂತೆ ಇತರೆ ಬಹು ವಾರ್ಷಿಕ ಬೆಳೆಯತ್ತ ಒಲವು ತೋರುತ್ತಿದ್ದಾರೆ. ಮೇವಿಗೆ ಆಸರೆಯಾಗಿದ್ದ ಕೃಷಿ ಭೂಮಿ, ಭತ್ತದ ಗದ್ದೆಯ ಬದುಗಳು ಹಾಗೂ ಕೆರೆ, ಕಟ್ಟೆಗಳ ಅಂಚು ಸೇರಿದಂತೆ ಮೆಕ್ಕೆಜೋಳದ ಹುಲ್ಲು ದಶಕದ ಈಚೆಗೆ ಕಣ್ಮರೆಯಾಗುತ್ತಿದೆ.

ಮೆಕ್ಕೆಜೋಳಕ್ಕೆ ಮೀಸಲಿಟ್ಟ ಭೂ ಪ್ರದೇಶವನ್ನು ಅಡಿಕೆ ಕ್ರಮೇಣ ಕಸಿಯುತ್ತಿದೆ. ಅಡಿಕೆ ತೋಟದ ಸ್ವಚ್ಛತೆಯ ದೃಷ್ಟಿಯಿಂದ ದೀರ್ಘಾವಧಿವರೆಗೆ ಹುಲ್ಲು ಬೆಳೆಯಲು ರೈತರು ಬಿಡುತ್ತಿಲ್ಲ. ಸದ್ಯಕ್ಕೆ ಮೇವಿನ ಕೊರತೆ ಕಾಡುತ್ತಿಲ್ಲವಾದರೂ, ಮುಂದಿನ ದಿನಗಳಲ್ಲಿ ಮೇವಿನ ಅಭಾವ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.

ತಾಲ್ಲೂಕಿನ ಆಯನೂರು, ಕುಂಸಿ, ಚೋರಡಿ ಸೇರಿದಂತೆ ಶಿಕಾರಿಪುರದ ಹಿತ್ತಲ, ಕಲ್ಮನೆ, ಸಾಲೂರು ಭಾಗದ ಕೆಲವು ಸಣ್ಣ ರೈತರು ಹೈನುಗಾರಿಕೆಯನ್ನೇ ಜೀವನೋಪಾಯಕ್ಕೆ ನಂಬಿಕೊಂಡಿದ್ದಾರೆ. ಇವರಿಗೆ ಮೇವು ಬೆಳೆಯಲು ಸಮರ್ಪಕ ಕೃಷಿ ಭೂಮಿ ಇಲ್ಲ. ಇದರಿಂದ, ಅಕ್ಕಪಕ್ಕದವರ ಜಮೀನುಗಳನ್ನು ಅವಲಂಬಿಸಿ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲಾಗುತ್ತಿತ್ತು. ಪ್ರಸ್ತುತ ಈ ಕೃಷಿ ಭೂಮಿಯನ್ನೂ ಅಡಿಕೆ ಬೆಳೆಯತ್ತ ತಿರುಗಿಸಲಾಗಿದ್ದು, ಸಮರ್ಪಕ ಹಸಿರು ಮೇವು ಲಭಿಸುತ್ತಿಲ್ಲ.

ಕುಂಸಿ, ಚೋರಡಿ ಭಾಗದ ಕರಡಿ ಬೆಟ್ಟ ಸೇರಿದಂತೆ ದೊಡ್ಡ ಲೈನ್ ಭಾಗದಲ್ಲಿ ರೈತರು ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದರು. ಇದರಿಂದ, ಸಾಕಷ್ಟು ಹಸಿರು ಹುಲ್ಲು ಲಭ್ಯವಾಗುತ್ತಿತ್ತು. ಈಚೆಗೆ ಕಾಡು ಪ್ರಾಣಿಗಳ ಉಪಟಳದಿಂದ ಬೇಸತ್ತ ರೈತರು ಕೆಲವು ಬೆಳೆಗಳಿಗೆ ವಿದಾಯ ಹೇಳಿದ್ದಾರೆ. ಈ ಕಾರಣಕ್ಕೆ, ದೊಡ್ಡಿಮಟ್ಟಿ, ಮರಾಠಿ ಕ್ಯಾಂಪ್, ಹಳೆ ಚೋರಡಿ ಭಾಗದ ಕೆಲ ರೈತರು ಜಾನುವಾರುಗಳಿಗೆ ಮೇವು ಪೂರೈಸಲು ಪರದಾಡುವಂತಾಗಿದೆ. 10 ಕಿ.ಮೀ. ದೂರವರೆಗೂ ತೆರಳಿ ಕುಂಸಿ ಭಾಗದ ಕೆಲವು ಊರುಗಳಿಂದ ಹಸಿರು ಹಲ್ಲು ತರುವ ಸ್ಥಿತಿ ಇದೆ.

ಶಿಕಾರಿಪುರದಲ್ಲಿ ಈ ಬಾರಿ 21,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇತ್ತು. ಈ ಪೈಕಿ 15,000 ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಮೆಕ್ಕೆಜೋಳದ ಮಧ್ಯೆ ಹಲುಸಾಗಿ ಬೆಳೆದ ಮೇವಿಗೆ ಪ್ರಾರಂಭದಲ್ಲಿಯೇ ಲಾಡಿಸ್ ಸಿಂಪಡಿಸಿ ಹಸಿರು ಹುಲ್ಲನ್ನು ನಿರ್ಮೂಲನೆ ಮಾಡಲಾಗಿದೆ. ಕೆಲವು ದೊಡ್ಡ ರೈತರು ತಮ್ಮ ಜಾನುವಾರುಗಳಿಗೆ ಸೀಮಿತಗೊಳಿಸಿಕೊಂಡು ಮೇವಿನ ಬೀಜ ಬಿತ್ತಿದ್ದಾರೆ.

‘ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗಿದ್ದರೂ ಮೆಕ್ಕೆಜೋಳಕ್ಕೆ ಹಿನ್ನಡೆಯಾಗಿದೆ. ಇಳುವರಿ ಕುಂಠಿತ, ಕಾಡು ಪ್ರಾಣಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು, ಅವಧಿಗೂ ಮೊದಲೇ ಪೈರು ಕಟಾವುಗೊಳಿಸಿ ಹಸಿ ಜೋಳದ ತೆನೆಯನ್ನು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ, ಮೇವಿನ ಕೊರತೆ ನೀಗಿಸುವ ಉದ್ದೇಶವೂ ಇದೆ ಎಂದು ಕುಂಸಿ ಸಮೀಪದ ರೈತ ರಾಜಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಲಿನ ಉತ್ಪಾದನೆ ಉದ್ದೇಶದಿಂದ ಸಾಕಿರುವ ಜರ್ಸಿ ಹಸುಗಳಿಗೆ ಮೇವು ಒದಗಿಸುವುದು ಸವಾಲಿನ ಕೆಲಸ. ದುಬಾರಿ ದರದ ಒಣಹುಲ್ಲಿನ ಮೇವನ್ನೂ ಸರಿಯಾಗಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ 6 ಗಂಟೆಗೆ ಮೇವು ತರಲು ಎತ್ತಿನ ಗಾಡಿಯೊಂದಿಗೆ ತೆರಳಿದರೆ, ಮನೆ ಸೇರುವುದು ಮಧ್ಯಾಹ್ನ ಆಗುತ್ತದೆ. ಇದರಿಂದ, ಜಾನುವಾರು ಸಾಕುವ ಆಸಕ್ತಿಯೇ ಇಲ್ಲವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಾನುವಾರು ಸಂಖ್ಯೆ ಶೇ 20ರಷ್ಟು ಇಳಿಕೆ

ಜಿಲ್ಲೆಯಲ್ಲಿ ಈಚೆಗೆ 21ನೇ ಜಾನುವಾರು ಗಣತಿ ಪೂರ್ಣಗೊಂಡಿದೆ. 2019ರಲ್ಲಿ 6.5 ಲಕ್ಷ ಇದ್ದ ಜಾನುವಾರುಗಳ ಸಂಖ್ಯೆ 2025ರ ಹೊತ್ತಿಗೆ 5.18 ಲಕ್ಷಕ್ಕೆ ಕುಸಿದಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎ. ಬಾಬುರಥ್ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಶೇ 20ರಷ್ಟು ಇಳಿಕೆಯಾಗಿದೆ. 1.20 ಲಕ್ಷ ಎಮ್ಮೆಗಳಿವೆ. ಹಂದಿ ಸಾಕಾಣಿಕೆ ಹೆಚ್ಚಳವಾಗಿದ್ದು ಅವುಗಳ ಸಂಖ್ಯೆ 6000 ದಿಂದ 12000ಕ್ಕೆ ಏರಿಕೆ ಆಗಿದೆ ಎಂದು ಮಾಹಿತಿ ನೀಡಿದರು.

ಜಾನುವಾರು ಸಾಕಲು ಹಿಂದೇಟು!

ಹಾಲು ಉತ್ಪಾದನೆ ಕೊಟ್ಟಿಗೆ ಗೊಬ್ಬರದ ಉದ್ದೇಶದಿಂದ ಜಾನುವಾರು ಸಾಕಾಣಿಕೆ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಆದರೆ ಮೇವಿನ ಕೊರತೆ ಕೃಷಿಯ ಕಡಿಮೆ ಆದಾಯ ಮಾರುಕಟ್ಟೆಯ ಅಸ್ಥಿರತೆ ಗೋಮಾಳ ಪ್ರದೇಶ ಅಲಭ್ಯತೆ ಹೆಚ್ಚಾಗಿದೆ. ಮಲೆನಾಡಿನಲ್ಲಿ ಈಚೆಗೆ ಅರಣ್ಯದ ನಡುವೆ ಹುಲ್ಲುಹಾಸು ಕಣ್ಮರೆಯಾಗುತ್ತಿದ್ದು ವನ್ಯಪ್ರಾಣಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಅರಣ್ಯಕ್ಕೆ ಮೇಯಲು ಬಿಟ್ಟ ಹಸುಗಳು ಹಿಂದಿರುಗಿ ಮನೆಗೆ ಬರುತ್ತಿಲ್ಲ. ವೈದ್ಯಕೀಯ ಸೌಲಭ್ಯದ ಕೊರತೆಯೂ ಇದೆ. ಇದರಿಂದ ಜಾನುವಾರು ಸಾಕಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಮೇವಿನ ಅಭಾವ ಕಂಡುಬಂದಿಲ್ಲ. ಮುಂದಿನ ದಿನದಲ್ಲಿ ಮೇವಿನ ಕೊರತೆ ನೀಗಿಸಲು ಇಲಾಖೆ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.
–ಡಾ.ಎ. ಬಾಬುರಥ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.