ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರ | ಬಾಲಕಿಗೆ ಕೋವಿಡ್‌ ಸೋಂಕು, ಜನರಿಗೆ ಆತಂಕ

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಭೇಟಿ ಪರಿಶೀಲನೆ
Last Updated 19 ಮೇ 2020, 20:00 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನ ಗ್ರಾಮವೊಂದರ 15 ವರ್ಷದ ಬಾಲಕಿಗೆ ಕೋವಿಡ್‌–19 ದೃಢಪಟ್ಟಿರುವಕಾರಣತಾಲ್ಲೂಕಿನ ಜನರಲ್ಲಿ ಆತಂಕ ಹೆಚ್ಚಿದೆ.

ಶಿಕಾರಿಪುರ ಪಟ್ಟಣಸಮೀಪ ಗ್ರಾಮವಿದೆ. ಹಾಗಾಗಿ,ಗ್ರಾಮ ಹಾಗೂ ಪಟ್ಟಣದ ಜನರು ಭೀತರಾಗಿದ್ದಾರೆ. ಬಾಲಕಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿ ದೊರೆತ ಕೂಡಲೇ ಪೊಲೀಸರು ಮಂಗಳವಾರ ಗ್ರಾಮದ ಗಡಿ ಭಾಗದಲ್ಲಿ ಬ್ಯಾರಿಕೇಡ್‌ ನಿರ್ಮಿಸುವ ಮೂಲಕ ಸೀಲ್‌ಡೌನ್‌ ಮಾಡಿದ್ದಾರೆ.

ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ವಾಸ್ತವ್ಯ ಹೂಡಿದೆ. ಸೋಂಕಿತ ಬಾಲಕಿ ಮನೆ ಸುತ್ತಮುತ್ತಲೂ ಸ್ಯಾನಿಟೈಸರ್‌ ಸಿಂಪಡನೆ ಮಾಡಲಾಗಿದೆ. ಪ್ರಸ್ತುತ ಬಾಲಕಿ ಕುಟುಂಬದ ಸದಸ್ಯರನ್ನು ಶಿವಮೊಗ್ಗಕ್ಕೆ ತಪಾಸಣೆಗಾಗಿ ಕರೆದೊಯ್ಯಲಾಗಿದೆ.

ಗ್ರಾಮಕ್ಕೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಸೋಂಕಿತ ಬಾಲಕಿ ಶಿಕಾರಿಪುರದ ಪಟ್ಟಣದಲ್ಲಿ ಓಡಾಡಿದ್ದಳು. ಪೊಲೀಸ್‌ ಠಾಣೆಗೆ ಬಂದಿದ್ದಳು ಎಂಬ ಸುದ್ದಿ ಪಟ್ಟಣದಲ್ಲಿ ಹರಿದಾಡುತ್ತಿದೆ.

*
ಸೋಂಕಿತ ಬಾಲಕಿ ಪಟ್ಟಣದಲ್ಲಿ ಓಡಾಡಿಲ್ಲ. ಬಾಲಕಿಗೆ ಸೋಂಕು ಹೇಗೆ ಬಂದಿದೆ ಎಂಬುದು ತಿಳಿದು ಬಂದಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
-ಎಂ.ಪಿ. ಕವಿರಾಜ್‌, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT